ವಿಜಯವಾಣಿ ಸುದ್ದಿಜಾಲ ಕಾರವಾರ
ಕಡವಾಡದ ಮೈಕ್ರೋ ಆರ್ಟಿಸ್ಟ್ ಮಿಲಿಂದ ಅಣ್ವೇಕರ್ ಬೆಳ್ಳಿಯಲ್ಲಿ ಅತಿ ಚಿಕ್ಕ ಸಂಸತ್ ಭವನ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ.
ಕೇವಲ 35 ಗ್ರಾಂನಲ್ಲಿ 2 ಇಂಚ್ ಎತ್ತರ ಒಂದುವರೆ ಇಂಚ್ ಅಗಲದ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ.
ಐದು ದಿನ ನಿರಂತರ ಶ್ರಮಿಸಿ ಥೇಟ್ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ. ಅದರ ಮೇಲೆ ತ್ರಿವರ್ಣ ಧ್ವಜ ಕೂಡ ಇದೆ.
ಮಿಲಿಂದ್ ಈ ಹಿಂದೆ 980 ಮಿಲಿಗ್ರಾಂನಲ್ಲಿ ನಿರ್ಮಾಣ ಮಾಡಿದ ಚಿನ್ನದ ಸರ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿತ್ತು. ಇದುವರೆಗೆ ಮಿಲಿಂದ್ 8 ಇಂಥ ಮೈಕ್ರೋ ಆರ್ಟ್ ನಿರ್ಮಿಸಿದ್ದಾರೆ.
.......