ಜಿಲ್ಲೆ

ಬೆಳ್ಳಿ ಪುತ್ಥಳಿ,ಆಡಳಿತ ಮಂಡಳಿಯಿಂದಲೂ ಆಂತರಿಕ ತನಿಖೆ

ಚಿತ್ರದುರ್ಗ: ಶ್ರೀ ಮುರುಘಾಮಠದಲ್ಲಿ ಈಚೆಗೆ ನಡೆದ ಮುರುಘಾ ಶರಣರ ಬೆಳ್ಳಿಪುತ್ಥಳಿ ಕಳವು ಮತ್ತು ಅದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂ ಧಿಸಿದಂತೆ ನಡೆಯುತ್ತಿರುವ ಪೊಲೀಸರ ತನಿಖೆಗೆ ಶ್ರೀ ಮಠದ ಆಡಳಿತ ಮಂಡಳಿ ಸಂಪೂರ್ಣವಾಗಿ ಸಹಕರಿಸಲಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ಬುಧವಾರ ಆಡಳಿತ ಮಂಡಳಿ ಸದಸ್ಯರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭಕ್ತರ ಆತಂಕಕ್ಕೆ ಕಾರಣವಾಗಿರುವ ಈ ಬೆಳವಣಿಗೆಗೆ ಖೇದ ವ್ಯಕ್ತಪಡಿಸಿದ ಅವರು,ಪ್ರಕರಣದ ಕಾಣದ ಕೈಗಳನ್ನು ಪತ್ತೆ ಹಚ್ಚಿ,ತಪ್ಪಿಸ್ಥರನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿ ಸುವ ಮೂಲಕ ಅಂಥ ಶಕ್ತಿಗಳನ್ನು ದೂರ ಮಾಡಬೇಕಿದೆ. ಪೊಲೀಸರ ತನಿಖೆ ಒಂದೆಡೆಯಾದರೆ,ಆಂತರಿಕವಾಗಿಯೂ ತನಿಖೆ ನಡೆಯಲಿ ದೆ ಎಂದರು.
ಶ್ರೀ ಮಠದ ಆಸ್ತಿಪಾಸ್ತಿ ರಕ್ಷಣೆ ಸೇರಿದಂತೆ ಮಠ, ಶಾಖಾ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಮಂಡಳಿ ಬದ್ಧವಾಗಿದ್ದು,ಶ್ರೀ ಮಠದ ಪರಂಪರೆ ರಕ್ಷಣೆ ಹೊಣೆಗಾರಿಕೆಯೂ ಇದೆ. ಈ ನಿಟ್ಟಿನಲ್ಲಿ ಸದಸ್ಯರು ಹಲವು ಜವಾಬ್ದಾರಿಗಳನ್ನು ಹಂಚಿಕೊಂಡು ನಿರ್ವಹಿಸುತ್ತಿ ದ್ದೇವೆ. ಕೊಡಗಿನ ಜಮೀನೊಂದರ ಒತ್ತುವರಿ ಸೇರಿದಂತೆ ಶ್ರೀ ಮಠಕ್ಕೆ ರಾಜ್ಯ,ಹೊರ ರಾಜ್ಯದಲ್ಲಿರುವ ಶ್ರೀ ಮಠದ ಆಸ್ತಿಗಳಿಗೆ ಎದುರಾಗಿ ರುವ ಕಾನೂನಾತ್ಮಕ ತೊಡಕುಗಳ ನಿವಾರಿಸಬೇಕಿದೆ. ಸಂಬಂಧಿಸಿದ ಜಿಲ್ಲಾಡಳಿತಗಳೊಂದಿಗೆ ಹಾಗೂ ಶಾಖಾ ಮಠಗಳ ಶ್ರೀಗಳೊಂದಿಗೆ,ಭ ಕ್ತರೊಂದಿಗೆ ಚರ್ಚಿಸಲಾಗಿದೆ ಎಂದರು.
ಆಡಳಿತ ಮಂಡಳಿ ಮುಂದಿರುವ ಹಲವು ಸವಾಲುಗಳನ್ನು ಎದುರಿಸಲು ಭಕ್ತರ ಸಹಕಾರದ ಅಗತ್ಯವಿದೆ. ಬೆಂಗಳೂರು,ಮೈಸೂರು, ಹಾಸನ, ದಾವಣಗೆರೆ,ರಾಣೆಬೆನ್ನೂರು,ಹಾವೇರಿ, ಧಾರವಾಡ ಮತ್ತಿತರೆಡೆ ರಾಜ್ಯದಲ್ಲಿರುವ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರು ವ ಶ್ರೀಮಠ,ಶಾಖಾ ಮಠಗಳ ಆಸ್ತಿಪಾಸ್ತಿಗಳ ರಕ್ಷಿಸಬೇಕಿದೆ. ಭಕ್ತರ ಆತಂಕ ನಿವಾರಿಸಿ ಅಭಿವೃದ್ಧಿ ಪಡಿಸಬೇಕಿದೆ. ಶಿಕ್ಷಣಸಂಸ್ಥೆಗಳನ್ನು ಸುಧಾ ರಿಸಬೇಕಿದೆ.
ನನಗೆ ವೈಯಕ್ತಿಕವಾಗಿ ಮಠದ ಮೇಲೆ ಅಪಾರ ಗೌರವವಿದೆ. ಭಕ್ತರ ಸಹಕಾರದೊಂದಿಗೆ ಕಳೆದ ಮೂರ‌್ನಾಲ್ಕು ತಿಂಗಳಿಂದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಚಿತ್ರದುರ್ಗ ಕೇಂದ್ರವಾಗಿದ್ದು,ಕೊಲ್ಲಾಪುರಸೇರಿದಂತೆ ಹಲವು ಶಾಖಾ ಮಠಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿ ದ್ದೇನೆ. ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಬಜೆಟ್‌ಮಂಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಭಕ್ತರ ಅಪೇಕ್ಷೆಯಂತೆ ಶ್ರೀ ಮಠದ ಕೇಂದ್ರದಲ್ಲೂ ಹೆಚ್ಚಿನ ಸಮಯ ವಿನಿಯೋಗಿಸುವುದಾಗಿ ಭರವಸೆ ನೀಡಿದರು. ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕು ಮಾರ ಸ್ವಾಮೀಜಿ, ಚಂದ್ರಶೇಖರ್, ವಕೀಲ ಉಮೇಶ್ ಇದ್ದರು.