ಕಲಬುರಗಿ: ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು, ಮಹಾರಾಷ್ಟçದ ಉಜನಿ ಡ್ಯಾಮ್‌ನಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಉರುಳು ಸೇವೆ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
ತೋಟದ ಮನೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು, ರೈತರ ಪ್ರತಿ ಎಕರೆಗೆ ೩೦ ಸಾವಿರ ರೂ. ಪರಿಹಾರ ನೀಡಬೇಕು. ಬೇಸಿಗೆಯಲ್ಲಿ ಉಜನಿ ಡ್ಯಾಮ್‌ನಿಂದ ಭೀಮಾ ನದಿಗೆ ೫ ಟಿಎಂಸಿ ನೀರು ಹರಿಸಬೇಕು, ಸಂಪೂರ್ಣ ಹದಗೆಟ್ಟ ಹೆದ್ದಾರಿಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.
ರೈತರು ಸಾಲ ಮಾಡಿ ಕೃಷಿ ಕೈಗೊಂಡಿದ್ದು, ಮಳೆ ಬಾರದೇ ಬೆಳೆಗಳು ಒಣಗಿ ಹೋಗಿವೆ. ಈಗಾಗಲೇ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದು, ಆದರೆ ಸಮರ್ಪಕ ಪರಿಹಾರ ವಿತರಿಸುವಲ್ಲಿ ನಿರ್ಲಕ್ಷÈ ವಹಿಸುತ್ತಿದೆ. ಬೆಳೆ ಕಳೆದುಕೊಂಡ ರೈತರ ಖಾತೆಗೆ ಎಕರೆಗೆ ೩೦ ಸಾವಿರ ರೂ. ನೀಡಬೇಕು. ಕಲಬುರಗಿ ಹೈಕೋರ್ಟ್ನಿಂದ ಅಫಜಲಪುರ ಮಾರ್ಗದ ಹೆದ್ದಾರಿ ದುರಸ್ತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಬಡದಾಳ್, ಮುಖಂಡ ಬಸವರಾಜ ಬಿರಬಿಟ್ಟಿ ಇತರರಿದ್ದರು.