ಮಂಜುನಾಥ ಶಿವಕ್ಕನವರ ಕುಂದಗೋಳ
ಕರೊನಾ ಕರ್ಫ್ಯ ಹಿನ್ನೆಲೆಯಲ್ಲಿ ಕೂಲಿ ಕಾರ್ವಿುಕರು ಹೊರಬಾರದ ಕಾರಣ ತಾಲೂಕಿನ ಬೆಳೆಗಳ ಕಟಾವಿಗೆ ಪರದಾಡá-ವಂತಾಗಿದೆ.
ಜೋಳ, ಗೋಧಿ, ಕುಸುಬಿ ಬೆಳೆಗಳು ಕಟಾವಿಗೆ ಬಂದಿದ್ದು, ಇನ್ನೊಂದು ವಾರದಲ್ಲಿ ಕಟಾವು ಮಾಡದಿದ್ದರೆ ನೆಲಕ್ಕೆ ಬಿದ್ದು ಹಾಳಾಗುತ್ತವೆ. ಅಲ್ಲದೇ, ಇಲಿಗಳ ಹಾವಳಿಯಿಂದ ಬೆಳೆಗಳು ಹಾಳಾಗುತ್ತಿವೆ. ಈ ಮೊದಲು ಮಾಗಡಿ, ಆದ್ರಳ್ಳಿ, ರಟ್ಟಿಗೇರಿ, ಗೌಡಗೇರಿ ಮುಂತಾದ ಗ್ರಾಮಗಳಿಂದ ಕೂಲಿ ಕಾರ್ವಿುಕರನ್ನು ಕರೆತರಲಾಗುತ್ತಿತ್ತು. ಈಗ ಕರೊನಾ ಕರ್ಫ್ಯ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿದ್ದರಿಂದ ಆಳುಗಳು ಸಹ ಬರುತ್ತಿಲ್ಲ. ಇದರಿಂದಾಗಿ ರೈತರಿಗೆ ಕರೊನಾ ರೋಗದ ಮಧ್ಯೆ ತಮ್ಮ ಬೆಳೆಗಳನ್ನು ಹಾಗೂ ಸೊಪ್ಪಿಯನ್ನು ಸಂಗ್ರಹಿಸುವುದೇ ದೊಡ್ಡ ಚಿಂತೆಯಾಗಿದೆ.
ಹೊಲದಲ್ಲಿ ಜೋಳ, ಗೋಧಿ, ಕುಸುಬಿ, ಬಿಟಿ ಹತ್ತಿ ಕಟಾವಿಗೆ ಬಂದೈತ್ರಿ. ಆದ್ರೆ ಆಳು ಸಿಗುತ್ತಿಲ್ಲರೀ ಏನ್ ಮಾಡಬೇಕ್ರಿ, 2 ದಿನದಿಂದ ಮಳೆ ಓಡಾಡಕತೆôತ್ರಿ. ಮಳೆ ಬಂದ್ರೆ ಎಲ್ಲಾನೂ ನೀರ್ ಪಾಲಾಗತ್ತರಿ. ಮೇವು ಸಂಗ್ರಹಿಸದಿದ್ದರೆ ಜಾನುವಾರುಗಳನ್ನೇ ಕೈಗೆ ಬಂದ ಬೆಲೆಗೆ ಮಾರಬೇಕ್ರೀ. ಏನೇ ಜಗತ್ತಿನಲ್ಲಿ ಬಂದರೂ ರೈತರಿಗೆ ಹಾನಿಯಾಗುತ್ತದೆ ಎಂದು ಪಟ್ಟಣದ ರೈತ ಪ್ರವೀಣಕುಮಾರ ಕಿರೇಸೂರ ಅಳಲು ತೋಡಿಕೊಂಡರು.