Version 1.0.0 
ಜಿಲ್ಲೆ

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ:ಪ್ರಸಕ್ತ ಸಾಲಿನ ಕೃಷಿ ಪ್ರಶಸ್ತಿ ಕಾರ‌್ಯಕ್ರಮದಡಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್‌ಲೈನ್ ಮೂ ಲಕ ಆ.31ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಮಟ್ಟಕ್ಕೆ ಶೇಂಗಾ(ಮಳೆಯಾಶ್ರೀತ),ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕು ಮ ಟ್ಟಕ್ಕೆ ಮುಸುಕಿನ ಜೋಳ(ಮಳೆ ಆಶ್ರೀತ),ಹೊಸದುರ್ಗ ತಾಲೂಕು ಮಟ್ಟಕ್ಕೆ ರಾಗಿ (ಮಳೆ ಆಶ್ರೀತ)ಹಾಗೂ ಚಳ್ಳಕೆರೆ, ಹಿರಿಯೂರು ಮ ತ್ತು ಮೊಳಕಾಲ್ಮೂರು ತಾಲೂಕು ಮಟ್ಟಕ್ಕೆ ಶೇಂಗಾ(ಮಳೆ ಆಶ್ರೀತ)ಬೆಳೆಗಳಿಗೆ ಅರ್ಜಿ ಸಲ್ಲಿಸಬಹುದು.
ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿಗೆ 30 ಸಾವಿರ ರೂ.(ಪ್ರ),25 ಸಾವಿರ ರೂ.(ದ್ವಿ),20 ಸಾವಿರ ರೂ(ತೃ)ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಗೆ 15 ಸಾವಿರ ರೂ.(ಪ್ರ),10 ಸಾವಿರ ರೂ.(ದ್ವಿ) 5 ಸಾವಿರ ರೂ.(ತೃ)ಇದೆ. ಪ್ರಸಕ್ತ ಸಾಲಿನಿಂದ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕ ರದ್ದುಪಡಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.