ಚಾಮರಾಜನಗರ: ನಗರದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಸಭೆಯಲ್ಲಿ ಸಂಘದ ಚಾಮರಾಜನಗರ ಸಮಿತಿಯನ್ನು ರಚಿಸಲಾಯಿತು.
ಜಿಲ್ಲಾಧ್ಯಕ್ಷರನ್ನಾಗಿ ಮೂಡ್ಲುಪುರ ಸೋಮಶೇಖರ್, ಗೌರವಾಧ್ಯಕ್ಷರಾಗಿ ರವಿಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಮನೋಜ್ ಕುಮಾರ್, ಉಪಾಧ್ಯಕ್ಷರಾಗಿ ಕೆಂಪರಾಜು ಕೊಳ್ಳೇಗಾಲ, ಸಹ ಕಾರ್ಯದರ್ಶಿಯಾಗಿ ಸುರೇಶ್ ಹರದನಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಮೂರ್ತಿ ನಂಜೇದೇವನಪುರ, ಖಜಾಂಚಿಯಾಗಿ ಮಧು ಮಲ್ಲಯ್ಯನಪುರ, ಸದಸ್ಯರಾಗಿ ಎಚ್.ವಿ.ರವಿ, ಕೆಂಪರಾಜು, ನವೀನ್, ಶಿವರಾಜು, ಜಿ.ಕುಮಾರ್, ರಂಗಸ್ವಾಮಿ, ಕೆ.ಮಹೇಶ್ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.