ಜಿಲ್ಲೆ

ಬೆಳೆ ಸಮೀಕ್ಷೆ ಕಾರ್ಯ ಚಟುವಟಿಕೆ ಅನುಷ್ಠಾನ

ಚಾಮರಾಜನಗರ: ಜಿಲ್ಲೆಯ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಳೆ ಸಮೀಕ್ಷೆ ಸೇವೆಯನ್ನು ಮಾಡಬಯಸುವ ಆಸಕ್ತ ಖಾಸಗಿ ನಿವಾಸಿಗಳು ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.

ಬೆಳೆ ಸಮೀಕ್ಷೆ ಕಾರ್ಯದಡಿ ಖಾಸಗಿ ನಿವಾಸಿಗಳಿಗೆ ಪ್ರತಿ ತಾಕಿನ ಮೊದಲ ಬೆಳೆಗೆ 11ರೂ. ರಂತೆ, ಬಹುಬೆಳೆ ಹೊಂದಿದ ಜಮೀನಿಗೆ ಪ್ರತಿ ಹೆಚ್ಚುವರಿ ಬೆಳೆ ದಾಖಲೆಗೆ 5ರೂ. ರಂತೆ ಗರಿಷ್ಠ 20ರೂ. ಗಳನ್ನು ಮೀರದಂತೆ ಗೌರವಧನವನ್ನು ಗರಿಷ್ಠ 1000 ತಾಕು ಮೀರದಂತೆ ಖಾಸಗಿ ನಿವಾಸಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.

ಬೆಳೆ ಸಮೀಕ್ಷೆ ಸೇವೆ ಮಾಡಲು ಆಸಕ್ತಿಯುಳ್ಳವರು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.