ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕಳಸ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ, ಭಾಸ್ಕರ್ ಕೊಪ್ಪ, ಕಲ್ಮರುಡಪ್ಪ, ಕೆ.ಸಿ.ನಾಗೇಶ್, ರಾಜೇಶ್, ಸುಂದರ ಶೆಟ್ಟಿ ಇತರರಿದ್ದರು.  
ಜಿಲ್ಲೆ

ಬೆಳೆ ವಿಮೆ ಬಿಡುಗಡೆಗೆ ಮನವಿ

ಕಳಸ: ಬೆಳೆ ವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕಳಸ ಬಿಜೆಪಿ ಮುಖಂಡರು ಮನವಿ ಮಾಡಿದರು.

ತಾಲೂಕಿನ ಆರು ಗ್ರಾಪಂ ಸಾವಿರಾರು ರೈತರಿಗೆ ಹಾಗೂ ಕೊಪ್ಪ ತಾಲೂಕು ವ್ಯಾಪ್ತಿಯ ರೈತರಿಗೆ ಈ ಬಾರಿಯ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಯಾಗದಿರುವುದನ್ನು ಸಂಸದ ಗಮನಕ್ಕೆ ತಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ತುರ್ತು ಜಿಲ್ಲಾ ಮಟ್ಟದ ತೋಟಗಾರಿಕೆ ಹಾಗೂ ಬೆಳೆ ವಿಮಾ ಕಂಪನಿ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಬೆಳೆ ವಿಮೆ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಳವಳ ವ್ಯಕ್ತಪಡಿಸಿದರು. ಏನೇ ಸಮಸ್ಯೆ ಇದ್ದರೂ ಬಗೆಹರಿಸಿ ಕೂಡಲೇ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ, ಕಾಫಿಬೋರ್ಡ್ ಸದಸ್ಯ ಭಾಸ್ಕರ್ ಕೊಪ್ಪ, ಬಿಜೆಪಿ ಮುಖಂಡರಾದ ಕಲ್ಮರುಡಪ್ಪ, ಕೆ.ಸಿ.ನಾಗೇಶ್, ರಾಜೇಶ್, ಹೇಮಂತ್ ಜೈನ್, ಅನಿಲ್‌ಕುಮಾರ್, ಸುಂದರ ಶೆಟ್ಟಿ ಇತರರಿದ್ದರು.