ಬೆಳಗಾವಿ: ಮುಂಗಾರು 2023 ನೇ ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯಡಿ ಬೆಳೆ ಸಮೀಕ್ಷೆಯಲ್ಲಿ ತಾಳೆಯಾಗದಿರುವ ಬೆಳೆಗಳಿಗೆ ವಿಮಾ ಪಾವತಿಸಿದ ಪ್ರಸ್ತಾವನೆಗಳಿಗೆ ಬೆಳೆ ಸಮೀಕ್ಷೆ ಆ್ಯಪ್ ಮುಖಾಂತರ ಸಂಬಂಧಪಟ್ಟ ರೈತರು ಸೆ.15 2023 ರೊಳಗಾಗಿ ತಾವು ಬೆಳೆ ವಿಮೆ ಪಾವತಿಸಿದ ಬೆಳೆಯ ಛಾಯಾಚಿತ್ರಗಳನ್ನು ಬೆಳೆ ಸಮೀಕ್ಷೆ ಆ್ಯಪ್ ಮುಖಾಂತರ ಅಪ್‌ಲೋಡ್ ಕಡ್ಡಾಯವಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಹೇಳಿದ್ದಾರೆ. ಒಂದ ವೇಳೆ ಬೆಳೆ ವಿಮೆ ಆ್ಯಪ್‌ದಲ್ಲಿ ೆಟೋಗಳನ್ನು ಅಪ್‌ಲೋಡ್ ಮಾಡದಿದ್ದರೇ,
ಅಂತಹ ರೈತರ ಅರ್ಜಿಗಳನ್ನು ಅರ್ಜಿಯನ್ನು ತಿರಸ್ಕರಿಸಲಾಗುವುದು. ಈ ರೈತರ ನೋಂದಾಯಿತ ದೂರವಾಣಿ ಸಂಖ್ಯೆಗಳಿಗೆ ಈಗಾಗಲೇ ಸಂದೇಶಗಳನ್ನು ಕೇಂದ್ರ ಕಚೇರಿಯಿಂದ ಕಳುಹಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಅಥವಾ ತಾಲ್ಲೂಕು ಅಧಿಕಾರಿಗಳನ್ನು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ (ಜಿ.ಪಂ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.