ಜಿಲ್ಲೆ

ಬೆಳೆ ವಿಮೆ ಪರಿಹಾರ ನೀಡಲು ಪ್ರತಿಭಟನೆ

ಬಳ್ಳಾರಿ : ರೈತರಿಗೆ ಬರ ಹಾಗೂ ಬೆಳೆ ವಿಮೆ ಪರಿಹಾರ ನೀಡಲು ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ತಾಲೂಕಿನ ಚೇಳ್ಳಗುರ್ಕಿ, ಜೋಳದರಾಶಿ, ಕಾರೇಕಲ್ಲು ಸೇರಿದ ವಿವಿಧ ಗ್ರಾಮದ ರೈತರು ಬುವಾರ ಪ್ರತಿಭಟಿಸಿದರು.
ರೈತ ಮುಖಂಡ ಸಿ.ಕೆ.ಬಸವನಗೌಡ ಮಾತನಾಡಿ, ಚೇಳ್ಳಗುರ್ಕಿ, ಜೋಳದರಾಶಿ, ಕಾರೇಕಲ್ಲು, ವೀರಾಪುರ, ಲಿಂಗದೇವನಹಳ್ಳಿ, ಕಗ್ಗಲ್ಲು, ಯಾಳ್ಪಿ ಗ್ರಾಮದ ರೈತರು ಕಳೆದ ಸಾಲಿನಲ್ಲಿ ಹಿಂಗಾರು ಕಡಲೆ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದು ಅನಾವೃಷ್ಠಿ ಕಾರಣದಿಂದ ಬಿತ್ತಿದ ಬೆಳೆಗಳು ಫಲ ನೀಡದೆ ಬರ ಆವರಿಸಿತ್ತು. ಅಲ್ಲದೇ ರಾಜ್ಯ ಸರ್ಕಾರವೇ 123 ತಾಲೂಕು ಬರ ಪೀಡಿತ ಘೋಷಿಸಿದೆ. ಆದರೂ ನಮಗೆ ಯಾವುದೇ ಬರ ಪರಿಹಾರ ದೊರಕದೆ ಸಂಕಷ್ಟ ಅನುವಿಸುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಕೂಡ ಅತಿವೃಷ್ಠಿಯಿಂದಾಗಿ ಬೆಳೆ ನಾಶವಾದರೂ ಇಲಾಖೆಗಳ ಸರಿಯಾಗಿ ಸರ್ವೆ ಮಾಡದೆ ರೈತರಿಗೆ ಬೆಳೆ ವಿಮೆ ಕೊಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.