ಜಿಲ್ಲೆ

ಬೆಳೆ ನಷ್ಟ ಪರಿಹಾರ ವಿತರಣೆ ವಿಳಂಬ ಖಂಡಿಸಿ ರೈತರ ಪ್ರತಿಭಟನೆ

ಚಿತ್ರದುರ್ಗ: ಬೆಳೆನಷ್ಟ, ಬೆಳೆವಿಮೆ ಪರಿಹಾರ ವಿತರಣೆ ವಿಳಂಬ ಖಂಡಿಸಿ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳ ರೈತರ ಸಾಲಗಳ ಮನ್ನಾ ಹಾಗೂ ಗೋ ಶಾಲೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ರಾಜ್ಯರೈತ ಸಂಘದ ಸದಸ್ಯರು ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸ ಲಾಯಿತು.
ರಾಜ್ಯದಲ್ಲಿ ಬರಗಾಲವಿದ್ದರೂ, ರಾಜ್ಯಸರ್ಕಾರ ಈವರೆಗೂ ರೈತರಿಗೆ ಯಾವುದೇ ಪರಿಹಾರ ಹಣ ವಿತರಿಸಿಲ್ಲ. 2000 ರೂ.ಪರಿಹಾರ ವಿ ತರಿಸುವುದಾಗಿ ಸರ್ಕಾರ ಹೇಳಿದ್ದರೂ ಯಾವೊಬ್ಬ ರೈತರಬ್ಯಾಂಕ್ ಖಾತೆಗೆ ಪರಿಹಾರವಾಗಲಿ ಅಥವಾ ಮಧ್ಯಂತರ ಪರಿಹಾರ ಜಮಾ ಆಗಿ ಲ್ಲ. ಇದರಿಂದಾಗಿ ಈ ಸರ್ಕಾರದ ಮೇಲೆ ಯಾವುದೇ ಭರವಸೆ ಇಲ್ಲದಂತಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ ರು.
ಆಂಧ್ರಪ್ರದೇಶದ ಮಾದರಿ ಹೆಕ್ಟರ್‌ಗೆ 25 ಸಾವಿರ ರೂ.ಬೆಳೆ ನಷ್ಟ ಪರಿಹಾರ ವಿತರಿಸಬೇಕು. ಮುಂಗಾರು ಮಳೆ ಇಲ್ಲದೆ ಬೆಳೆ ಸಂಪೂ ರ್ಣ ನಾಶವಾಗಿದೆ. ಬರಗಾಲವೆಂದು ಘೋಷಣೆ ಆಗಿದ್ದರೂ ಈವರೆಗೆ ಬೆಳೆವಿಮೆ ಪರಿಹಾರ ಸಂದಾಯವಾಗಿಲ್ಲ. ಕೂಡಲೇ ಬೆಳೆ ವಿಮೆ ಪರಿಹಾರ ವಿತರಿಸಬೇಕು.
ಜಾನುವಾರುಗಳಿಗೆ ಮೇವಿನ ಕೊರತೆ ಇದ್ದು, ಗ್ರಾಪಂಕ್ಕೆ ಒಂದರಂತೆ ಗೋಶಾಲೆಗಳನ್ನು ಪ್ರಾರಂಭಿಸಬೇಕು. ಸಹಕಾರ ಬ್ಯಾಂಕ್‌ಗಳ ಸಾ ಲಕ್ಕೆ ರೈತರು ಅಸಲು ಜಮಾ ಮಾಡಿದರೆ, ಬಡ್ಡಿ ಮನ್ನಾ ಮಾಡಲಾಗುವುದೆಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ನೀಡಿರುವ ಹೇಳಿಕೆ ಯನ್ನು ಖಂಡಿಸಿದರು.
ಬರಗಾಲದಿಂದಾಗಿ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ಕಠಿಣ ಸನ್ನಿವೇಶದಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಎಲ್ಲ ಬ್ಯಾ ಂಕ್‌ಗಳ ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯರೈತ ಸಂಘದ ಉ ಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು,ಹಂಪಯ್ಯನಮಾಳಿಗೆ ಧನಂಜಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಿಪ್ಪೇಸ್ವಾ ಮಿ ಕರಿಯಣ್ಣ, ನಾಗರಾಜು ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.