ಚಿತ್ರದುರ್ಗ: ಬೆಳೆ ಕಟಾವು ಪ್ರಯೋಗದಲ್ಲಿ ತಪ್ಪು ದತ್ತಾಂಶ ನಮೂದಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖ ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ 2ನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಸಮಯಕ್ಕೆ ಸರಿಯಾಗಿ ಕಟಾವು ಪ್ರಯೋಗ ಮಾಡದೆ ನಿರ್ಲಕ್ಷ್ಯತೋರಿಸಿದ್ದರಿಂದಾಗಿ ರೈತರಿಗೆ ಸಮಸ್ಯೆಯಾಯಿತು.
ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಬೆಳೆ ಕ ಟಾವು ಪ್ರಯೋಗದಲ್ಲಿ ತಪ್ಪಾಗಿ ವಿಮೆ ಪರಿಹಾರಕ್ಕೆ ತೊಂದರೆಯಾದರೆ,ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಗೊಳಿಸಿ,ಅವರ ವೇತನದಿಂದ ವಿಮೆ ಪರಿಹಾರ ಮೊತ್ತ ಭರಿಸಲಾಗುವುದೆಂದರು.
ನಿಗದಿ ಪಡಿಸಿದ ಬೆಳೆ ಬಿತ್ತನೆಯಾಗಿಲ್ಲವೆಂದು ಕಚೇರಿಯಲ್ಲೇ ಕೂತು ವರದಿ ನೀಡಬಾರದು.ಕೃಷಿ, ತೋಟಗಾರಿಕೆ,ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಬಿತ್ತನೆಯಾಗಿಲ್ಲವೆಂದು ತಪ್ಪು ವರದಿ ನೀಡಿರೂ ನಿರ್ಧ್ಯಾಕ್ಷಿಣ್ಯವಾಗಿ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಅಧಿಕಾರಿಗಳ ಅಮಾನತು
ಸರಿಯಾದ ಸಮಯಕ್ಕೆ ಬೆಳೆ ಕಟಾವು ಪ್ರಯೋಗ ಕೈಗೊಳ್ಳದೇ,ಬೆಳೆ ಕೊಯ್ಲು ಮುಗಿದ ನಂತರ ಕೃತಕವಾಗಿ ಪರೀಕ್ಷೆ ನಡೆಸಿ,ಪ್ರಯೋಗ ಅನೂರ್ಜಿತಗೊಳಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇಂತಹ ಎಲ್ಲ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿದ ಅಧಿಕಾರಿಗಳಿಂದ ವಿವರಣೆ ಪಡೆಯಬೇಕು, ತಾಲೂಕು ಮಟ್ಟದಲ್ಲಿ ತಹಸೀ ಲ್ದಾರ್‌ಗಳು ಸಮ ನ್ವಯ ಸಮತಿ ಸಭೆಗಳನ್ನು ನಡೆಸ ಬೇಕೆಂದರು. 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 4,166 ಬೆಳೆ ಕಟಾವು ಪ್ರಯೋಗಗಳನ್ನು ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ರವಿಕುಮಾರ್ ಹೇಳಿದರು.
ಕೇಂದ್ರ ಪುರಸ್ಕೃತ 11ನೇ ಕೃಷಿ ಗಣತಿ 2ನೇ ಹಂತದ ಸರ್ವೇ ಪೂರ್ಣಗೊಳಿಸಲು ನ.30 ಕಡೆಯ ದಿನವಾಗಿದೆ. ಗಣತಿಗಾಗಿ ಜಿಲ್ಲೆಯ ಲ್ಲಿ 206 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. 55 ಗ್ರಾಮಗಳಲ್ಲಿ ಸರ್ವೇ ಪೂರ್ಣಗೊಂಡಿದ್ದು,155 ಗ್ರಾಮಗಳ ಸರ್ವೇಯನ್ನು ಕೂಡಲೇ ಪೂರ್ಣಗೊಳಿಸ ಬೇಕೆಂದು ಡಿಸಿ ಸೂಚಿಸಿದರು.
ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್,ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ,ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರಾದ ಶಶಿರೇಖಾ,ಯಾಸಿನ್ ಮತ್ತಿತರ ಅಧಿಕಾರಿಗಳಿದ್ದರು.
-----------