ವಿಧಿಯ ಅಟ್ಟಹಾಸಕ್ಕೆ ಜನ್ಮದಿನದಂದೇ ರಸ್ತೆ ಅಪಘಾತದಲ್ಲಿ ಮೃಯಪಟ್ಟ ಜೇವರ್ಗಿಯ ಸಾರಿಗೆ ಸಿಬ್ಬಂದಿ.  
ಜಿಲ್ಲೆ

ಬೆಳಗ್ಗೆ ಜನ್ಮದಿನ, ಸಂಜೆ ದಫನ್!

ಕಲಬುರಗಿ: ಜನ್ಮದಿನ ಆಚರಿಸಿಕೊಂಡು ಸಂಭ್ರಮದಿಂದ ಕರ್ತವ್ಯಕ್ಕೆ ಹೋಗುತ್ತಿದ್ದ ಬಸ್ ಚಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟ ಘಟನೆ ಜೇವರ್ಗಿ ಬಸ್ ಡಿಪೋ ಮುಂಭಾಗದಲ್ಲಿ ಸೋಮವಾರ ಜರುಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜೇವರ್ಗಿ ಬಸ್ ಡಿಪೋದ ಚಾಲಕ ಲಾಲ್‌ಹುಸೇನ್ ಮನಿಯಾರ್ ಸಾವು (೩೮) ಮೃತ ದುರ್ದೈವಿ. ಮನಿಯಾರ್ ಸೋಮವಾರ ಬೆಳಗ್ಗೆ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಳಿಕ ಕರ್ತವ್ಯಕ್ಕಾಗಿ ಬೈಕ್ ಮೇಲೆ ಡಿಪೋಕ್ಕೆ ಆಗಮಿಸುವಾಗ ಮಾರ್ಗ ಮಧ್ಯೆ ಕಾರು-ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗ್ಗೆ ಸಂಭ್ರಮದಿಂದ ಬರ್ತಡೇ ಆಚರಿಸಿಕೊಂಡ ವ್ಯಕ್ತಿ ಅರ್ಧ ಗಂಟೆಯಲ್ಲೇ ಮೃತಪಟ್ಟಿರುವ ಸುದ್ದಿ ಕೇಳಿ ಕುಟುಂಬಸ್ಥರಿಗೆ ಒಂದು ಕ್ಷಣ ದಿಗ್ಬಾö್ರಂತಿ ಬಡೆದಂತಾಗಿದೆ. ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು, ಜನ್ಮದಿನದಂದೇ ಅಂತ್ಯಕ್ರಿಯೆ ನಡೆಸುವ ಪ್ರಸಂಗ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು.