ಸಿದ್ದಾಪುರ: ದೇಶಾದ್ಯಂತ ಕರೊನಾ ವೈರಸ್ ಹೆಚ್ಚಾಗುತ್ತಿರುವುದರಿಂದ ತಾಲೂಕು ವರ್ತಕರ ಸಂಘವು ಮುಂಜಾಗ್ರತೆ ಕ್ರಮವಾಗಿ ರೋಗ ಹರಡುವುದನ್ನು ತಡೆಯಲು ಪಟ್ಟಣದಲ್ಲಿ ಜು. 7ರಿಂದ 31ರವರೆಗೆ ಬೆಳಗ್ಗೆ 5ರಿಂದ ಸಂಜೆ 5ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ತೀರ್ವನಿಸಿದೆ. ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಎನ್. ಹುಲೇಕಲ್ ಅಧ್ಯಕ್ಷತೆಯಲ್ಲಿ ಪಟ್ಟಣದಲ್ಲಿ ಶನಿವಾರ ಸಭೆ ನಡೆಸಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ತಹಸೀಲ್ದಾರ್ಗೆ ಮನವಿ: ವ್ಯಾಪಾರದ ಅವಧಿ ಕಡಿಮೆ ಮಾಡಿರುವ ಬಗ್ಗೆ ಸಂಘ ಕೈಗೊಂಡಿರುವ ತೀರ್ವನದ ಪತ್ರವನ್ನು ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ, ಎಪಿಎಂಸಿ ಕಾರ್ಯದರ್ಶಿ ಎಂ.ಜಿ. ನಾಯ್ಕ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಸಿಪಿಐ ಪ್ರಕಾಶ ಅವರಿಗೆ ಸಲ್ಲಿಸಿದರು. ಈ ವೇಳೆ ಸಂಘದ ಉಪಾಧ್ಯಕ್ಷ ವಿನಾಯಕ ಎಸ್. ಶೇಟ್, ಕಾರ್ಯದರ್ಶಿ ನಂದನ ಬೋರ್ಕರ್, ಜಿ.ಎಸ್. ಭಟ್ಟ, ಸ್ವಸ್ಥಿಕ್ ಕಲ್ಲಾಳ,ಪಪಂ ಸದಸ್ಯ ರವಿ ನಾಯ್ಕ ಜಾತಿಕಟ್ಟೆ, ಅನಿಲ ದೇವನಳ್ಳಿ, ಸಿ.ಎಸ್. ಗೌಡರ್, ಮಂಜುನಾಥ ನಾಯ್ಕ ಇತರರಿದ್ದರು.</