ಕೆ.ಆರ್.ಸಾಗರ: ಬೆಳಗೊಳ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಸುಮಾರು 20ಕ್ಕೂ ಹೆಚ್ಚು ನಿವೇಶನ ರಹಿತರಿಗೆ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ಶನಿವಾರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.
ಗ್ರಾಮದ ನಾಡಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕರು, ನಿವೇಶನ ರಹಿತರಿಗೆ ಹಿಂದೆ ಕೆಲ ಕಾರಣಗಳಿಂದ ಹಕ್ಕುಪತ್ರ ನೀಡಲಾಗಿರಲಿಲ್ಲ. ಇದೀಗ ನೀಡಲಾಗುತ್ತಿದ್ದು, ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪತಹಸೀಲ್ದಾರ್ ಸಾಕಮ್ಮ, ಗ್ರಾಪಂ ಉಪಾಧ್ಯಕ್ಷ ಅರವಿಂದ, ರಾಜಸ್ವ ನಿರೀಕ್ಷಕ ಪುಟ್ಟಸ್ವಾಮಿ, ಗ್ರಾಪಂ ಸದಸ್ಯರಾದ ಬಿ.ವಿ.ಸುರೇಶ್, ರ‌್ಯಾಂಬೋ ರವಿಕುಮಾರ್, ಗ್ರಾಮದ ಯಜಮಾನರಾದ ಶ್ರೀನಿವಾಸ್, ವಿಷಕಂಠೇಗೌಡ, ಮುಖಂಡರಾದ ಬಿ.ಎಂ.ಸ್ವಾಮಿಗೌಡ, ಮಹದೇವಸ್ವಾಮಿ, ಯತೀಶ್, ರವೀಶ್, ರವಿ, ವೆಂಕಟೇಶ್, ಹರೀಶ, ಪಿಡಿಒ ಪರಮೇಶ್ವರ, ಗ್ರಾಮಲೆಕ್ಕಿಗ ರಘು ಸೇರಿದಂತೆ ಇತರರು ಇದ್ದರು.