***********
ಬೆಳಗುಂಬ ಶ್ರೀಗುರುಸಿದ್ದರಾಮೇಶ್ವರ ದೇವಾಲಯ ಉದ್ಘಾಟನೆ
ತುಮಕೂರು: ತಾಲೂಕಿನ ಬೆಳಗುಂಬ ಶ್ರೀಗುರುಸಿದ್ದರಾಮೇಶ್ವರ ಸ್ವಾಮಿ ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಕಾರ್ಯಕ್ರಮ ನವೆಂಬರ್ 8ರಂದು ಜರುಗಲಿದೆ ಎಂದು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.
ನವೆಂಬರ್ 8ರ ಶುಕ್ರವಾರ ಸಂಜೆ 4.30ಕ್ಕೆ ಶುಭ ಗೋಧೂಳಿ ಸಮಯದಲ್ಲಿ ಗಂಗಾಪೂಜೆ, ಮಹಾಗಣಪತಿಪೂಜೆ ಮೂಲಕ ಪ್ರಾರಂಭಿಸಲಾಗುವುದು. ನಂತರ ಸಂಜೆ 6ಕ್ಕೆ ಬೆಳ್ಳಾವಿ ಕಾರದೇಶ್ವರಮಠ ಶ್ರೀಕಾರದ ವೀರಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಧ್ವಜಾರೋಹಣ ಹಾಗೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.
ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಅಂಗವಾಗಿ ನ.11ರವರೆಗೂ ಅಭಿಷೇಕ, ಹೋಮ, ಪೂರ್ಣಫಲ ಸಮರ್ಪಣೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ನವೆಂಬರ್ 8 ರಿಂದ 11ರವರೆಗೆ ಪ್ರತಿ ದಿನ ದಾಸೋಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.