ಬೆಳಗಾವಿ:ಖಡೇಬಜಾರ ಪೊಲೀಸ್ ಠಾಣೆಯಿಂದ ಅನತಿದೂರದಲ್ಲಿರುವ ಗೊಂಧಳಿಯಲ್ಲಿರುವ ಮನೆಯೊಂದಕ್ಕೆ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, ನಗದು ಸೇರಿ 11.69 ಲಕ್ಷ ರೂ, ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ಚೇತನ ಮನೋಹರ ಕುರಣೆ ಅವರು ಖಡೇ ಬಜಾರ ಠಾಣೆಗೆ ದೂರು ನೀಡಿದ್ದಾರೆ. ಚೇತನ ಅವರು, ಶುಕ್ರವಾರ ಸಂಜೆ ಮನೆಗೆ ಬೀಗ ಹಾಗಿ ಗಣೇಶಪುರದಲ್ಲಿರುವ ಅವರ ಸಹೋದರಿ ಮನೆಗೆ ತೆರಳಿದ್ದರು. ಬೆಳಗ್ಗೆ ಅಕ್ಕಪಕ್ಕದ ಜನತೆ ಸುದ್ದಿಮುಟ್ಟಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 264 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದು ಹಣವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.