ಜಿಲ್ಲೆ

ಬೆಳಗಾವಿ-ಹುನಗುಂದ-ರಾಯಚೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

ಹುಬ್ಬಳ್ಳಿ : ಬೆಳಗಾವಿ - ಹುನಗುಂದ - ರಾಯಚೂರು ರಾಷ್ಟಿ್ರಯ ಹೆದ್ದಾರಿ ನಿರ್ವಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, 320 ಕಿಮೀ ರಸ್ತೆ ನಿರ್ವಣಕ್ಕಾಗಿ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಈ ಭಾಗದ ಜನರ ಬಹುಕಾಲದ ಬೇಡಿಕೆ ಶೀಘ್ರವೇ ಈಡೇರಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ‘ಎಕನಾಮಿಕ್ ಕಾರಿಡಾರ್’ ಘೊಷಣೆ ಅಡಿ ರಾಯಚೂರಿನಿಂದ ಬೆಳಗಾವಿಯವರೆಗಿನ ಹೆದ್ದಾರಿ ಸೇರಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಎಕನಾಮಿಕ್ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿವೆ. ಈ ಹೊಸ ಹೆದ್ದಾರಿ ಪೂರ್ಣಗೊಂಡಲ್ಲಿ ಮೀರಜ್ -ಸೊಲ್ಲಾಪುರ ಮಾರ್ಗದ ಈಗಿರುವ ಹತ್ತು ತಾಸಿನ ಪ್ರಯಾಣದ ಅವಧಿ ಕೇವಲ 5-6 ಗಂಟೆಯಲ್ಲಿ ತಲುಪಬಹುದಾಗಿದೆ.

ಬೆಳಗಾವಿ-ಹುನಗುಂದ 168 ಕಿ.ಮೀ ಮತ್ತು ಹುನಗುಂದ-ರಾಯಚೂರ 156 ಕಿ.ಮೀ ಉದ್ದದ ರಾಷ್ಟಿ್ರಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ರಾಯಚೂರು - ಬೆಳಗಾವಿ ಮಧ್ಯೆ ಒಟ್ಟು 325 ಕಿ. ಮೀ. ಅಂತರವಿದ್ದು, 12,500 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ಹೆದ್ದಾರಿ ನಿರ್ವಿುಸಲಾಗುತ್ತದೆ.

ಬೆಳಗಾವಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಬದಾಮಿ, ಹುನಗುಂದ ಮೂಲಕ ರಾಯಚೂರು ಸಂರ್ಪಸುವ ರಾಷ್ಟ್ರೀಯ ಹೆದ್ದಾರೆ ನಂ. 748/ಎ ಇದಾಗಿದೆ.

ಈ ಯೋಜನೆಯಲ್ಲಿ ಒಟ್ಟು 593 ಕಿ. ಮೀ. ಉದ್ದದ ಈ ಹೆದ್ದಾರಿಯ ಅಭಿವೃದ್ಧಿಯನ್ನು ಆರು ಹಂತಗಳಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸಧ್ಯ ರಾಯಚೂರು - ಬೆಳಗಾವಿ ಮಧ್ಯೆ 325 ಕಿ. ಮೀ. ಸಂಚರಿಸಲು 10 ಗಂಟೆಗಳ ಪ್ರಯಾಣ ಮಾಡಬೇಕಿದೆ. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳಿಗೂ ಆಹ್ವಾನ ನೀಡುತ್ತಿದೆ. ಈ ಮಾರ್ಗದ ಸಂಚಾರ ಒತ್ತಡ ತಗ್ಗಿಸುವ ಉದ್ದೇಶದಿಂದಲೇ ’ಎಕನಾಮಿಕ್ ಕಾರಿಡಾರ್’ ನಿರ್ವಿುಸಲು ಯೋಜಿಸಲಾಗಿದೆ. ವಾಹನಗಳ ಸಂಚಾರ ಸುಗಮಗೊಳಿಸುವುದು ಹಾಗೂ ಪ್ರಯಾಣದ ಸಮಯ ತಗ್ಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.