ಬೆಳಗಾವಿ: ನವರಾತ್ರಿ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಹಿಂದು ಸಮಾಜದ ಸಂಘಟನೆ ಮತ್ತು ಸಂಪ್ರದಾಯದ ಜಾಗೃತಿಗಾಗಿ ಸಂಭಾಜಿ ಬಿಢೆಯವರು ಆರಂಭಿಸಿರುವ ನವರಾತ್ರಿಯ ಈ ದುರ್ಗಾಮಾತಾ ದೌಡ್ ಈಗ ಬೆಳಗಾವಿಯಲ್ಲಿ ಮೂರು ದಶಕಗಳಿಂದ ಆರಂಭಗೊಂಡು, ಈಚೆಗೆ ಹಳ್ಳಿಹಳ್ಳಿಗೂ ವ್ಯಾಪಿಸಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿಯೂ ಯುವಕರು, ಯುವತಿಯರು, ಚಿಕ್ಕಮಕ್ಕಳು ಸೇರಿದಂತೆ ಎಲ್ಲರೂ ಸೇರಿ ಅದ್ಧೂರಿ ದೌಡ್ ಆರಂಭಿಸಿದ್ದಾರೆ.
ಮೂರನೇ ದಿನವಾದ ಬುಧವಾರ ಈ ದೌಡ್ ಗ್ರಾಮದ ಮುಖ್ಯ ರಸ್ತೆಯಿಂದ ಮೂಲಿಓಣಿ, ಕಮ್ಮಾರ ಓಣಿ, ದೊಡ್ಡ ಓಣಿ ಹಾಗೂ ಅಂಬೇಡ್ಕರ ಗಲ್ಲಿಯಲ್ಲಿ ಸಂಚರಿಸಿತು. ಕೇವಲ ತಮ್ಮ ಗ್ರಾಮದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ಚಿಕ್ಕದಿನಕೊಪ್ಪ-ಕೊಡಚವಾಡ ಗ್ರಾಮಕ್ಕೂ ಈ ದೌಡ್ ಸಂಚರಿಸುವ ಮೂಲಕ ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷವಾಗಿ ನವರಾತ್ರಿಯ 8ನೇ ದಿನ ತಮ್ಮೂರಿನ ರುದ್ರಸ್ವಾಮಿ ದೇವಸ್ಥಾನದಿಂದ ಧರ್ಮ ಜಾಗೃತಿಯ ಸಂಕಲ್ಪದೊಂದಿಗೆ ಬೆಳಗಾವಿ ತಾಲೂಕಿನ ರಾಜಹಸಂಗಡ ಕೋಟೆಯವರೆಗೂ ದೌಡ್ ಕೈಗೊಳ್ಳುತ್ತಿರುವ(ಸುಮಾರು 20ಕಿಮೀ) ವಿಶೇಷ.