ಜಿಲ್ಲೆ

ಬೆಳಗಾವಿ ತಾಲೂಕಿನಲ್ಲಿ ಭಾನುವಾರ ವಿದ್ಯುತ್ ನಿಲುಗಡೆ

ಬೆಳಗಾವಿ: ಭಾನುವಾರ ಸೆ.10ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ಗಂಟೆಯವರೆಗೆ ಕೆಪಿಟಿಸಿಎಲ್ ವತಿಯಿಂದ 110 ಕೆ.ವ್ಹಿ. ಕಣಬರ್ಗಿ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಬೆಳಗಾವಿ ತಾಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗಾವಿ ತಾಲೂಕಿನ ಮುಚ್ಚಂಡಿ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ಹೊನಗಾ, ದಾಸರವಾಡಿ, ಕೆಂಚ್ಯಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಕಡೋಲಿ, ಅಗಸಗಾ ಹಾಗೂ ಜಾಫರವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.