ಬಾಗಲಕೋಟೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಆಚರಣೆಗೆ ಕೋಟೆನಾಡು ಸಜ್ಜುಗೊಂಡಿದೆ. ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ, ಸಂಡಗರ ಮನೆ ಮಾಡಿದೆ. ಬೆಲೆ ಏರಿಕೆ, ಅತಿವೃಷ್ಠಿಯ ಕಹಿ ನೆನಪು, ನೋವಿನ ನಡುವೆಯು ಸಾರ್ವಜನಿಕರು ಸಾಂಪ್ರದಾಯಕ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ.
ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಆಚರಣೆ ಸಂಭ್ರಮದಿಂದ ಜರುಗಲಿದೆ. ಗುರುವಾರ ಬೆಳಗ್ಗೆ ನರಕ ಚುತುದರ್ಶಿ ಅಂಗವಾಗಿ ಬೆಳಗ್ಗೆ ಆರುತಿ, ಅಭ್ಯಂಗ ಸ್ನಾನ, ದೇವರ ದರ್ಶನ ಮಾಡಿಕೊಂಡಿದ್ದಾರೆ. ಶುಕ್ರವಾರ ಅಮವಾಸೆ, ಶನಿವಾರÀ ಪಾಡ್ಯ ಆಚರಣೆ ನಡೆಯಲಿದೆ. ಕಚೇರಿ, ಸಂಘ, ಸಂಸ್ಥೆ ಹಾಗೂ ಅಂಗಡಿ, ಮುಂಗಟ್ಟುಗಳಲ್ಲಿ ಲಕ್ಷಿ÷್ಮÃ ಪೂಜೆ ಗುರುವಾರ , ಶುಕ್ರವಾರ ಸಂಜೆ ಆಚರಿಸಲಾಗುತ್ತಿದೆ.
ತರಹೇವಾರಿ ಆಕಾಶಪುಟ್ಟಿಗಳ ಲಗ್ಗೆ...
ಬಾಗಲಕೋಟೆ ನಗರ ಮಾರುಕಟ್ಟೆ ಸೇರಿದಂತೆ ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಇಳಕಲ್ಲ, ಬೀಳಗಿ ಪಟ್ಟಣದ ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶಪಟ್ಟಿಗಳು ಲಗ್ಗೆ ಇಟ್ಟಿವೆ. ೩೦೦ ರಿಂದ ೫೦೦ ರೂ. ವರೆಗೆ ಆಕಾಶಪುಟ್ಟಿಗೆ ದರ ನಿಗದಿ ಮಾಡಲಾಗಿದೆ. ದೀಪಾವಳಿ ಹಬ್ಬದ ಅಂಗವಾಗಿ ಅಂಗಡಿಗಳನ್ನು ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳೆಯುವ ಕಾರ್ಯ ಪೂರ್ಣಗೊಂಡಿದೆ. ಪ್ಲಾಸ್ಟಿಕ್, ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ. ಹೊಸ ಮಾದರಿಗಳ ಬಟ್ಟೆಗಳ ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಚಿಕ್ಕಮಕ್ಕಳು ಪಟಾಕಿಗಳ ಖರೀದಿ ಮಾಡಲು ಪಾಲಕರ, ಪೋಷಕರ ದುಂಬಾಲು ಬೀಳುತ್ತಿದ್ದಾರೆ.
ಅಲ್ಲದೆ ವ್ಯಾಪಕ ಪ್ರಮಾಣದಲ್ಲಿ ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದ ಕುಂಬಳಕಾಯಿ ಮಾರುಕಟ್ಟೆ ಆಗಮಿಸಿವೆ. ಬೈಕ್, ಕಾರು ಸೇರಿದಂತೆ ಹೊಸ ವಾಹನಗಳು ರಸ್ತೆಗೆ ಇಳಿಯಲಿದ್ದು, ಈಗಾಗಲೇ ಮುಂಗಡವಾಗಿ ವಾಹನಗಳ ಬುಕ್ಕಿಂಗ್ ಕಾರ್ಯ ಜೋರಾಗಿ ನಡೆದಿದೆ. ಗೃಹ ಉಪಯೋಗಿ ವಸ್ತುಗಳ ವ್ಯಾಪಾರದ ಭರಾಟೆ ನಡೆಯಲಿದೆ.
ಮನೆಗಿಂತಲೂ ಅಂಗಡಿ, ಮುಂಗುಟ್ಟು ಗಳಲ್ಲಿ ಲಕ್ಷಿ÷್ಮÃ ಪೂಜೆಯ ಅದ್ದೂರಿಯಾಗಿ ನಡೆಯಲಿದೆ. ದೇವಿಗೆ ವಿಶೇಷ ಅಡುಗೆ ಸಿದ್ಧಪಡಿಸಿ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಜನರು ಹಳೇ ವಾಹನಗಳನ್ನು ಶುಚಿಗೊಳಿಸಿ, ವಿವಿಧ ರೀತಿಯಲ್ಲಿ ಶೃಂಗಾರಗೊಳಿಸಿ ವಿಶೇಷ ಪೂಜೆ ಮಾಡಲಿದ್ದಾರೆ. ಅಂಗಡಿ, ಮುಂಗಟ್ಟುಗಳು ವಿದ್ಯುತ್ ಅಲಂಕಾರದಿಂದ ಕಂಗೂಳಿಸುತ್ತೀವೆ.