ಬಾಗಲಕೋಟೆ: ಪ್ರತಿಯೊಬ್ಬರ ಬೆಳಕಿನ ಬದುಕಿಗೆ ಶಿಕ್ಷಕ ದಾರಿದೀಪ ಹಾಗೂ ಮಾರ್ಗದರ್ಶಕನಾಗುತ್ತಾನೆ ಎಂದು ಡಾ.ಶ್ರೀನಿವಾಸ್ ಕೆ. ಬನ್ನಿಗೋಳ ತಿಳಿಸಿದರು.
ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಗುರುವಿನ ಗುಲಾಮನಾಗಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದೆಂದರು.
ಶ್ರೀನಿವಾಸ್ ಒಡೆಯರ್ ಮಾತನಾಡುತ್ತಾ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವ ಸಹಿತ ಬದುಕಿನ ಮರ್ಮಗಳನ್ನ ಅರಿತುಕೊಂಡು ಮುನ್ನಡೆಯಬೇಕು ಅಂದಾಗ ಸಾಧನೆ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭ ವೈದ್ಯಕೀಯ ರಂಗದಲ್ಲಿ ಪ್ರಾಧ್ಯಾಪಕರಾಗಿ ಶ್ರೇಷ್ಠ ಕಾರ್ಯನಿರ್ವಹಿಸಿದ ಡಾ. ಶ್ರೀನಿವಾಸ್ ಬನ್ನಿಗೋಳ ಹಾಗೂ ಡಾ.ಶ್ರೀನಿವಾಸ ಒಡೆಯರ ಅವರಿಗೆ ಸಂಸ್ಥೆಯ ಪರವಾಗಿ ನೀಡಲಾಯಿತು.
ಈ ಸಂದರ್ಭ ಎಂ.ಆರ.ಎನ.ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡೀನ್ ಆದ ಡಾ. ಶಿವಕುಮಾರ್ ಗಂಗಾಲ, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಲ್ಹಾದ್ ಗಂಗಾವತಿ, CBSC ಪ್ರಾಂಶುಪಾಲ ಸಚಿನ್ ಬಾತ್ರ, ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ದೀಪಾ ಗಂಗಾಲ, ಡಾ.ವೀಣಾ ಕುಲಕರ್ಣಿ, ಡಾ. ಸರಸ್ವತಿ, ಡಾ.ರಜನಿ ದಡೆದ, ಡಾ. ರೇಖಾ ಸಕ್ಕರಿ ಭಾಗವಹಿಸಿದ್ದರು.