ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಗುರುವಾರ ಹುತಾತ್ಮ ಯೋಧ ಮಹೇಶ್ ಮರಿಗೊಂಡ ಅವರ ಪಾರ್ಥಿವ ಶರೀರಕ್ಕೆಅಂತಿಮ ಗೌರವ ಸಲ್ಲಿಸಿದರು. 
ಜಿಲ್ಲೆ

ಬೆಲ್ಲದ ನಾಡಿನ ಹೆಮ್ಮೆಯ ಯೋಧನಿಗೆ ಅಂತಿಮ ವಿದಾಯ

ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಸೈನಿಕರಿದ್ದ ವಾಹನ ಪ್ರಪಾತಕ್ಕೆ ಉರಳಿ ಸಾವನ್ನಪ್ಪಿದ್ದ ಯೋಧರಲ್ಲಿ ಒಬ್ಬರಾಗಿದ್ದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಗುರುವಾರ ಸಂಜೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಲಿಂಗಾಯತ ಸಂಪ್ರದಾಯದAತೆ ಅಂತ್ಯಸAಸ್ಕಾರ ನೆರವೇರಿಸಲಾಯಿತು.

ಪಟ್ಟಣ ಮಾತ್ರವಲ್ಲದೇ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಜನಸ್ತೋಮ, ಮಾಜಿ ಸೈನಿಕರು, ಶಾಲಾ ವಿದ್ಯಾರ್ಥಿಗಳು, ಗಣ್ಯರು, ಜನಪ್ರತಿನಿಽಗಳು, ಅಽಕಾರಿಗಳು ಹುತಾತ್ಮ ಯೋಧ ಮಹೇಶ್ ಮರಿಗೊಂಡ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದರು.

ಬೆಳಗ್ಗೆ ಬೆಳಗಾವಿಯಿಂದ ಮರಾಠ ರೆಜಿಮೆಂಟ್‌ನಿAದ ಸೈನಿಕರು ಮೃತ ಮಹೇಶ್ ಪಾರ್ಥಿವ ಶರೀರವನ್ನು ಮಹಾಲಿಂಗಪುರಕ್ಕೆ ತೆಗೆದುಕೊಂಡು ಬಂದರು. ಯೋಧನ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕಂಬನಿ ಹರಿಸಿದರು.

ಮಹೇಶ್ ಅಮರ ರಹೇ ಅಮರ ರಹೇ, ವಂದೇ ಮಾತರಂ ಸೇರಿದಂತೆ ದೇಶಭಕ್ತಿ ಘೋಷಣೆಗಳು ಪ್ರತಿಧ್ವನಿಸಿದವು. ಬಳಿಕ ಸಾರ್ವಜನಿಕರ ದರ್ಶನಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಪಾರ್ಥಿವ ಶರೀರ ಇಡಲಾಗಿತ್ತು. ಅಪಾರ ಜನರು ಅಂತಿಮ ದರ್ಶನ ಪಡೆದರು.

ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ದಾರಿಯುದ್ಧಕ್ಕೂ ಅಪಾರ ಜನರು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಕೆಂಗೇರಿಮಡ್ಡಿ ಸರ್ಕಾರಿ ಜಾಗೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಯೋಧನ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟçಧ್ವಜವನ್ನು ಕುಟುಂಬದವರಿಗೆ ಹಸ್ತಾಂತರಿಸಿ, ಅಂತ್ಯಸAಸ್ಕಾರ ನಡೆಸಲಾಯಿತು.

ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಎಸ್ಪಿ ಅಮರನಾಥ ರೆಡ್ಡಿ ಸೇರಿದಂತೆ ಸ್ಥಳೀಯ ಜನಪ್ರತಿನಿಽಗಳು ಹಾಗೂ ಅಽಕಾರಿಗಳು ಗೌರವ ಸಲ್ಲಿಸಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.