ಜಿಲ್ಲೆ

ಬೆರಟಿಕೆರೆ ತುಂಬಿಸಲು ವಿವಿಧ ಯೋಜನೆ

Chikkamagaluru

ಚಿಕ್ಕಮಗಳೂರು: ಬೆರಟಿಕೆರೆ ತುಂಬಲು ಯೋಜನೆಗಳು ತಯಾರಾಗಿದ್ದು ಗೋಂಧಿ ನಾಲೆ ಯೋಜನೆ ಜತೆಗೆ ಮಾದರಸಕೆರೆ, ದಾಸರಹಳ್ಳಿ ಕೆರೆ, ಅಯ್ಯನಕೆರೆ ಕೋಡಿ ಬಿದ್ದ ನೀರನ್ನು ಬೆರಟಿಕೆರೆಗೆ ಹಾಯಿಸಲಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಹುಲಿಕೆರೆಯ ಬೆರಟಿಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.

ಮೂರು ವರ್ಷಗಳಲ್ಲಿ ಹುಲಿಕೆರೆ ಗ್ರಾಮ ಪಂಚಾಯಿತಿಗೆ 9.98 ಕೋಟಿ ರೂ. ವೆಚ್ಚದಲ್ಲಿ ಬೆರಟಿಕೆರೆ, ಕಂಚಗಾರನಹಳ್ಳಿ ಕೆರೆ, ನಾಗೇನಹಳ್ಳಿ ಕಟ್ಟೆ, ಕಾಶಮ್ಮನಕಟ್ಟೆ ಕೆರೆ ತುಂಬಿಸಲು ಹಣ ಮಂಜೂರು ಮಾಡಿ ಡಿಪಿಆರ್ ತಯಾರಿಸಲಾಗಿದೆ. ರಸ್ತೆ ಇನ್ನಿತರ ಕಾಮಗಾರಿಗಳಿಗೆ 9.85 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಗೋಂಧಿ ನಾಲೆ ಯೋಜನೆಯಡಿ ಭದ್ರಾ ನದಿಯಿಂದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರಿನ ಎಲ್ಲ ಕೆರೆಗೆ 1,281 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿಗೆ 2ನೇ ಹಂತದಲ್ಲಿ 400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಿಂದ ಸಖರಾಯಪಟ್ಟಣ ಹೋಬಳಿಯ ಎಲ್ಲ್ಲ ಕೆರೆಗಳು ಭರ್ತಿಯಾಗಲಿವೆ. ಜಿಲ್ಲೆಯಲ್ಲಿ 1,400 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ಪೂರೈಸುವ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು 15 ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.