ಜಿಲ್ಲೆ

ಬೆನ್ನುಮೂಳೆ ಶಸಚಿಕಿತ್ಸೆ ಕಾರ್ಯಾಗಾರ ನಾಳೆ

ಚಾಮರಾಜನಗರ : ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ, ಕೀಲು ಮತ್ತು ಮೂಳೆ ವಿಭಾಗದ ವತಿಯಿಂದ ನ.8 ರಂದು ಟ್ರಾನ್ಸ್‌ಪೋರೋಮಿನಲ್ ಆ್ಯಂಡ್ ಇಂಟರ್ ಲ್ಯಾಮಿನರ್ ಎಂಡೋಸ್ಕೋಪಿ ಶಸಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಶಸ ಚಿಕಿತ್ಸಾಧಿಕಾರಿ ಡಾ.ಕೃಷ್ಣಪ್ರಸಾದ್ ತಿಳಿಸಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರು ಜಿಲ್ಲಾ ಆಸ್ಪತ್ರೆಯ ಶಸಚಿಕಿತ್ಸಕರ ಕೊಠಡಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ರಾಜ್ಯದ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಈ ಕಾರ್ಯಾಗಾರಕ್ಕೆ ಕರ್ನಾಟಕ ಮೆಡಿಕಲ್ ಕೌನ್ಸಿಲ್, ರಾಜೀವ್ ಗಾಂಧಿ ಯೂನಿವರ್ಸಿಟಿ, ಬೆಂಗಳೂರು ಆಥೋಪೆಡಿಕ್ ಸೊಸೈಟಿ, ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಟ್ರಸ್ಟ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಸಿಮ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರ ನೀಡಿದೆ ಎಂದರು.

ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವ ಕಾಯಕ್ರಮದಲ್ಲಿ ಎಂಡೋಸ್ಕೋಪಿ ಮೂಲಕ ಬೆನ್ನುಮೂಳೆ ಶಸಚಿಕಿತ್ಸೆ ನಡೆಸುವಲ್ಲಿ ನುರಿತ ತಜ್ಞರಾದ ಡಾ.ಕೀರ್ತಿವಾಸನ್, ಡಾ.ಮೃತ್ಯುಂಜಯ, ಡಾ.ರವಿಕುಮಾರ್, ಡಾ.ರವೀಂದ್ರನಾಥ್, ಹಾಗೂ ಡಾ.ಮಹೇಶ್ ಅವರು ವಿವಿಧ ವಿಷಯಗಳ ಕುರಿತು ಸೆಮಿನಾರ್ ನಡೆಸಿಕೊಡುವರು ಎಂದರು.

ಬಳಿಕ ನಡೆಯುವ ಕಾರ್ಯಕ್ರಮವನ್ನು ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಉದ್ಘಾಟಿಸುವರು. ವೈದ್ಯಕೀಯ ಆಡಳಿತಾಧಿಕಾರಿ ನಂಜುಂಡೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಸಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಡಾ.ಗಿರೀಶ್ ಪಟೇಲ್, ಐಎಂಎ ಸದಸ್ಯ ಡಾ.ಬಸವರಾಜೇಂದ್ರ, ಡಾ.ಸುಜನಾ ತೇಜಾ, ಡಾ.ಪದ್ಮಾಕ್ಷ, ಡಾ.ಹರೀಶ್ ಮೂರ್ತಿ, ಡಾ.ರೇಣುಕಾದೇವಿ, ಡಾ.ಶಿವಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಈ ಕಾರ್ಯಾಗಾರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 3 ರೋಗಿಗಳಿಗೆ ಶಸ ಚಿಕಿತ್ಸೆ ನಡೆಸಲಾಗುತ್ತದೆ. ಈ ಶಸಚಿಕಿತ್ಸೆಯನ್ನು ದೊಡ್ಡ ಪರದೆಯಲ್ಲಿ ಲೈವ್ ಪ್ರಾತ್ಯಕ್ಷಿಕೆ ಮೂಲಕ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರದರ್ಶನ ಮಾಡಲಾಗುತ್ತದೆ. ಈ ಕಾರ್ಯಾಗಾರಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ವೈದ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಮಾರುತಿ, ಡಾ.ರಾಘವೇಂದ್ರ ಹಾಜರಿದ್ದರು.