ಜಿಲ್ಲೆ

ಬೆಣ್ಣೆತೋರಾ ಡ್ಯಾಂನಿಂದ ಬೆಳೆ ಹಾನಿ

ರಮೇಶ ಮೇಳಕುಂದಾ

ಕಲಬುರಗಿ: ಬೆಣ್ಣೆತೋರಾ ಜಲಾಶಯದಿಂದ ಅವೈಜ್ಞಾನಿಕವಾಗಿ ನೀರು ಹರಿಬಿಡುವುದರಿಂದ ಕೆಳಭಾಗದ ಗ್ರಾಮಗಳಾದ ಹೇರೂರ, ಸಾವತಖೇಡ, ಶೆಳ್ಳಗಿ, ಜೀವನಮಡಗಿ, ಕಲ್ಲಹಿಪ್ಪರಗಾ, ಚೊಂಚಿ, ಬಣಮಿ ಮತ್ತು ಹಳೇ ಹೆಬ್ಬಾಳವರೆಗಿನ ರೈತರ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿಗೀಡಾಗುತ್ತಿರುವುದು ತಡೆಯಲು ಆಗ್ರಹಿಸಿ ನಗರದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಬೆಣ್ಣೆತೋರಾ ಡ್ಯಾಂನಿAದ ಅಧಿಕಾರಿಗಳು ಅವೈಜ್ಞಾನಿಕವಾಗಿ ಪ್ರತಿವರ್ಷ ಎಲ್ಲ ರೇಡಿಯಲ್ ಗೇಟ್ ತೆಗೆದು ನೀರು ಬಿಡುತ್ತಿದ್ದಾರೆ. ಇದರಿಂದ ಕೆಳಭಾಗದ ೮ರಿಂದ ೧೦ ಕಿಲೋ ಮೀಟರ್‌ರೆಗೆ ನೀರು ಹರಿದು, ಜಮೀನುಗಳಿಗೆ ನುಗ್ಗುತ್ತಿದೆ. ಕೂಡಲೇ ಅದನ್ನು ನಿಯಂತ್ರಿಸಬೇಕು, ರೈತರ ಜಮೀನು ಭೂಸ್ವಾಧಿನ ಪಡಿಸಿಕೊಂಡು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಶಿವಲಿಂಗ ಹಳಮನಿ, ಮಲ್ಲಿಕಾರ್ಜುನ ಪಟ್ಟಣ, ನಾಗರಾಜ ಪಟ್ಟಣ, ಬಸವರಾಜ, ರಾಮ ಹಿಪ್ಪರಗಿ, ಬಾಬುರಾವ, ಸಿದ್ದಲಿಂಗಪ್ಪ ಹಿ