ಜಿಲ್ಲೆ

ಬೆಣಚಕಲ್ಲು ಬಳಿ ವಿದ್ಯುತ್​ ಸ್ಪರ್ಶಿಸಿ ಚಿರತೆ ಸಾವು

ಹುಲಿಯೂರುದುರ್ಗ:- ಕುಣಿಗಲ್​ ತಾಲೂಕಿನ ಬೆಣಚಕಲ್ಲು ಗ್ರಾಮದ ಬಳಿ ವಿದ್ಯುತ್​ ಸ್ಪರ್ಶಿಸಿ 4 ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. ಬೆಣಚಕಲ್ಲು ಹಾಗೂ ಒಡ್ಡರಹಾಳು ಗ್ರಾಮದ ಮಧ್ಯದಲ್ಲಿರುವ ಬನ್ನಿಮಂಟಪದ ಅರಳಿ ಮರದಲ್ಲಿದ್ದ ಬಾವಲಿ ಹಿಡಿಯಲು ಶನಿವಾರ ರಾತ್ರಿ ಮರ ಏರಿದಾಗ 11 ಕೆವಿ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಬೆಳಗ್ಗೆ ಚಿರತೆ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಅಧಿಕಾರಿ ಪಿ.ಜಗದೀಶ್​ ಮತ್ತು ಅಧಿಕಾರಿಗಳು ಚಿರತೆ ಶವ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.