ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ವಯೋವೃದ್ಧಿಗೆ ಬೆಡ್ ಕೊಡದೇ ನೆಲದ ಮೇಲೆಯೇ ಕೂರಿಸಿ ಚಿಕಿತ್ಸೆ ನೀಡಿದ ಆರೋಪವನ್ನು ಇಲ್ಲಿನ ಕಿಮ್್ಸ ವೈದ್ಯರು ಎದುರಿಸುತ್ತಿದ್ದಾರೆ.
ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಚನ್ನವ್ವ (67) ಎನ್ನುವ ವೃದ್ಧೆ ಚಿಕಿತ್ಸೆಗೆಂದು ಆಗಮಿಸಿದ್ದರು. ಅವರಿಗೆ ಬೆಡ್ ಕೊಡದೇ ನೆಲದ ಮೇಲೆ ಕೂಡಿಸಿದ್ದಾರೆ. ಗ್ಲೂಕೋಸ್ ಬಾಟಲ್ ಹಾಕಲು ಸ್ಟ್ಯಾಂಡ್ ಕೂಡ ನೀಡಿಲ್ಲ. ಅಲ್ಲಿಯೆ ವೈದ್ಯಕೀಯ ಸಿಬ್ಬಂದಿ ಓಡಡುತ್ತಿದ್ದರೂ ನರಳಾಡುತ್ತಿದ್ದ ವೃದ್ಧೆಯತ್ತ ಗಮನಹರಿಸಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.