ಕಲಬುರಗಿ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಒಂದರಿAದ ೧೦ನೇ ತರಗತಿವರೆಗೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತುಮಕೂರು ಜಿ¯್ಲÉ ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯ ಗವಿಮಠದ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾಸಂಸ್ಥೆಯಿAದ ಉಚಿತ ಜ್ಞಾನ, ಅನ್ನದಾಸೋಹ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಲೆ ಮುಖ್ಯಗುರು ಸೋಮಶೇಖರಸ್ವಾಮಿ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಶೇ.೭೫ ಫಲಿತಾಂಶ ಬಂದಿದ್ದು, ಬೀದರ್, ಕಲಬುರಗಿ ಮತ್ತು ಬಳ್ಳಾರಿ ಜಿ¯್ಲÉ ಸೇರಿ ಉತ್ತರ ಕರ್ನಾಟಕದಿಂದ ಹೆಚ್ಚಿನ ಕಡುಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿz್ದÁರೆ. ಬೀದರ್, ಕಲಬುರಗಿ ತಲಾ ೧೦೦ ವಿದ್ಯಾರ್ಥಿಗಳು ಮತ್ತು ಬಳ್ಳಾರಿ ಜಿ¯್ಲÉಯಿಂದ ೧೫೦ ವಿದ್ಯಾರ್ಥಿಗಳು ಪಾಸಾಗಿz್ದÁರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಲಬುರಗಿಯ¯್ಲÉÃ ಸೂಕ್ತ ಸ್ಥಳಾವಕಾಶ ಸಿಕ್ಕರೆ ಗವಿಮಠ ಶಾಲೆ ಶಾಖೆ ಆರಂಭಿಸಿ, ಗುಣಮಟ್ಟದ ಶಿP್ಷÀಣ ನೀಡಲು ಚಿಂತಿಸಲಾಗುತ್ತಿದೆ. ಮಾಹಿತಿಗೆ ೯೯೪೫೦೨೦೩೨೯, ೯೮೪೫೭೮೫೪೨೫, ೯೯೪೫೩೧೮೫೩೫, ೮೦೮೮೮೨೪೪೦೪, ೮೩೧೦೦೭೩೨೫೬ ಸಂಪರ್ಕಿಸಬಹುದು ಎಂದು ಹೇಳಿದರು. ಮರಿಸ್ವಾಮಿ, ಜಯಣ್ಣ, ವಿಶ್ವನಾಥ, ನೀಲಕಂಠ ಇತರರಿದ್ದರು.