ಬೆಟ್ಟದಪುರ ಗ್ರಾಮದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು. ನಿತಿನ್ ವೆಂಕಟೇಶ್, ರಹಮದ್ ಜಾನ್ ಬಾಬು , ಸಣ್ಣಸ್ವಾಮಿಗೌಡ, ಅನಿತಾ, ಸರಸ್ವತಿ, ಪುಟ್ಟರಾಜು ಇದ್ದರು. 
ಜಿಲ್ಲೆ

ಬೆಟ್ಟದಪುರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ

ಬೆಟ್ಟದಪುರ: ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ವಿತರಿಸುವ ಕಾರ್ಯಕ್ಕೆ ಮಾಜಿ ಶಾಸಕ ಕೆ.ವೆಂಕಟೇಶ್ ಶುಕ್ರವಾರ ಗ್ರಾಮದಲ್ಲಿ ಚಾಲನೆ ನೀಡಿದರು.

ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಗೃಹಜ್ಯೋತಿ, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂ., 10 ಕೆ.ಜಿ ಅಕ್ಕಿಯನ್ನು ನೀಡಲಾಗುವುದು ಎಂದರು.

ಇದಕ್ಕೂ ಮುನ್ನ ಗ್ರಾಮದ ಶಾಂತವೀರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಹೊಸ ಉಪ್ಪಾರ ಬೀದಿ, ಪೇಟೆ ಬೀದಿಯ ಪ್ರತಿ ಮನೆಗೂ ತೆರಳಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.

ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮದ್ ಜಾನ್ ಬಾಬು, ಮುಖಂಡರಾದ ಬಿ.ಟಿ.ಸಣ್ಣಸ್ವಾಮಿಗೌಡ, ಜಯರಾಮು, ಸರಸ್ವತಿ, ಅನಿತಾ ತೋಂಟಪ್ಪಶೆಟ್ಟಿ, ಡಿ.ಜೆ.ಮಲ್ಲೇಗೌಡ , ಶಿಲ್ಪಾ, ಹರೀಸ್, ಪುಟ್ಟರಾಜು, ಕುಮಾರ್, ವೆಂಕಟೇಶ್ ಇತರರಿದ್ದರು.