ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3,553ಕ್ಕೆ ಏರಿದೆ. ಮಂಗಳವಾರ 6 ಜನ ಮೃತಪಟ್ಟಿದ್ದು, ಒಟ್ಟು 109 ಜನ ಕರೊನಾಕ್ಕೆ ಬಲಿಯಾಗಿದ್ದಾರೆ.
ಈವರೆಗೆ 1,453 ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,991ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ಪತ್ತೆಯಾದ ಪ್ರಕರಣಗಳ ತಾಲೂಕುವಾರು ಮಾಹಿತಿ ಇಂತಿದೆ.
ಧಾರವಾಡ ತಾಲೂಕು: ಮೃತ್ಯುಂಜಯ ನಗರ, ಟೋಲ್ನಾಕಾ ಬಳಿಯ ಬಸವಶ್ರೀ ಅಪಾರ್ಟ್ವೆುಂಟ್, ಶಿವಾನಂದ ನಗರ, ಗುಲಗಂಜಿ ಕೊಪ್ಪದ ರಾಜನಗರ, ಸಾರಸ್ವತಪುರ, ಶಕ್ತಿ ಕಾಲನಿ, ಹೆಬ್ಬಳ್ಳಿ ಅಗಸಿ, ಸತ್ತೂರ ಆಶ್ರಯ ಕಾಲನಿ, ಶಿವಗಿರಿ, ಜಯನಗರ, ಸತ್ತೂರ ರಾಜಾಜಿನಗರ, ಮಾಳಾಪುರ, ಬೆನಕನಕಟ್ಟಿ, ಮರೇವಾಡ ಗ್ರಾಮ, ಮಾಳಮಡ್ಡಿ, ನಾರಾಯಣಪುರ, ಕಮಲಾಪುರ, ಗರಗ ಗ್ರಾಮದ ಬಸವೇಶ್ವರ ನಗರ, ಹಂಗರಕಿ, ಸಿ.ಬಿ.ನಗರ, ಕೊಪ್ಪದಕೇರಿ, ತೇಜಸ್ವಿನಗರ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಸೋಮಾಪುರ, ನಿಜಾಮುದ್ದೀನ್ ಕಾಲನಿ, ಮದಿಹಾಳ, ಮಂಗಳವಾರ ಪೇಟ, ಗೊಲ್ಲರ ಕಾಲನಿ, ಟಾಟಾ ಮಾರ್ಕೆಪೋಲೋ, ಹಾಶ್ಮಿನಗರ, ಮೆಹಬೂನನಗರ, ಭೂಸಪ್ಪ ಚೌಕ್, ಸತ್ತೂರ ಎಸ್ಡಿಎಂ ಆಸ್ಪತ್ರೆ, ಮಣಕಿಲ್ಲಾ, ನಂದಿಗಡ, ಕಾಮನಕಟ್ಟಿ ಪಂಚಕಚೇರಿ ಓಣಿ, ಸತ್ತೂರ ಉದಯಗಿರಿ.
ಹುಬ್ಬಳ್ಳಿ ತಾಲೂಕು: ವೀರಾಪುರ ಓಣಿ ಕರಿಯಮ್ಮನ ಗುಡಿ ಹತ್ತಿರ, ಗೋಕುಲ ರಸ್ತೆಯ ರುದ್ರಗಂಗಾ ಲೇಔಟ್, ನೇಕಾರನಗರ, ನವನಗರದ ಕರ್ನಾಟಕ ವೃತ್ತ, ಸಿಟಿ ಪಾರ್ಕ್, ಹಳೆ ಹುಬ್ಬಳ್ಳಿಯ ನೂರಾನಿ ಪ್ಲಾಟ್, ರೇಲ್ವೆ ಸುರಕ್ಷಾ ದಳದ ಬ್ಯಾರಕ್, ಇಂದ್ರಾನಗರ, ಫಾರೆಸ್ಟ್ ಕಾಲನಿ, ಗೋಕುಲ ರಸ್ತೆಯ ಸಮನ್ ಕಾಲನಿ, ಜಯಪ್ರಕಾಶ ನಗರ, ಕೇಶ್ವಾಪುರ, ಕುಸುಗಲ್ ರಸ್ತೆಯ ಆಕಾಶ ಪಾರ್ಕ್, ವಿದ್ಯಾನಗರ, ಗಣೇಶಪೇಟ್ ಗೂಡ್ಶೆಡ್ ರಸ್ತೆ, ವಿಶ್ವೇಶ್ವರನಗರ, ಆದರ್ಶನಗರ, ಗೋಪನಕೊಪ್ಪ, ಬ್ಯಾಹಟ್ಟಿ, ಅಯೋಧ್ಯಾನಗರ, ಗುರುಸಿದ್ಧೇಶ್ವರ ನಗರ, ಬಸವೇಶ್ವರ ಪಾರ್ಕ್, ವಾಳ್ವೇಕರ ಗಲ್ಲಿ, ಪಗಡಿ ಓಣಿ, ಹಳೇ ಹುಬ್ಬಳ್ಳಿಯ ಅಯೋಧ್ಯಾನಗರ, ಕೆ.ಬಿ. ನಗರ, ಬಸವೇಶ್ವರನಗರ, ಹೊಸೂರ, ಸಿದ್ಧಾರೂಢನಗರ, ಮಧುರಾ ಕಾಲನಿ, ವಿಶಾಲನಗರ, ಲಿಂಗರಾಜನಗರ, ಶಾಂತಿನಗರ, ಕಸಬಾ ಪೊಲೀಸ್ಠಾಣೆ, ಕಟಗರ ಓಣಿ ಸದರಸೋಫಾ, ಶಾಂತಿನಿಕೇತನ, ಘಂಟಿಕೇರಿ, ಭೈರಿದೇವರಕೊಪ್ಪ, ಉಣಕಲ್ಲ ಶ್ರೇಯಾನಗರ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ, ನ್ಯೂ ಗಬ್ಬೂರ, ಆನಂದ ನಗರ, ಇಂಗಳಹಳ್ಳಿ ಗ್ರಾಮದ ಮಠದ ಓಣಿ, ವಿಕಾಸನಗರದ ಸಿದ್ಧಲಿಂಗೇಶ್ವರ ಕಾಲನಿ, ಬೆಂಡಿಗೇರಿ ಓಣಿ, ಚನ್ನಮ್ಮ ವೃತ್ತ, ಕಲ್ಲೂರ ಲೇಔಟ್, ಪ್ರಿಯದರ್ಶಿನಿ ಕಾಲನಿ, ಚನ್ನಪೇಟೆ ರಸ್ತೆ ವಿಠ್ಠಲಪೇಟೆ, ಹಳೇಹುಬ್ಬಳ್ಳಿ ವಿಶಾಲನಗರ ಬಳಿ, ಚೇತನಾ ಕಾಲನಿ, ಸಿದ್ದನಗರ, ಬೆಂಗೇರಿಯ ಕುರುಬರ ಓಣಿ.
ಕುಂದಗೋಳ ತಾಲೂಕು ಆಸ್ಪತ್ರೆ, ಗುಡಗೇರಿ ಜೈನರ ಓಣಿಯಲ್ಲಿ ಮೂರು ಪ್ರಕರಣಗಳು. ಕಲಘಟಗಿ ತಾಲೂಕು ಬೆಲವಂತರ.
ಇನ್ನು ಅನ್ಯ ಜಿಲ್ಲೆಗಳಾದ ಹಾವೇರಿ ಜಿಲ್ಲೆ ಸವಣೂರ ತಾಲೂಕು ತಿಮ್ಮಾಪುರ, ತೆವರಮೆಳ್ಳಹಳ್ಳಿ, ಶಿಗ್ಗಾಂವಿಯ ಕುಂಬಾರ ಓಣಿ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಇಟಗಿ, ಸವದತ್ತಿ ತಾಲೂಕಿನ ಚಿಕ್ಕುಂಬಿ, ಕಿತ್ತೂರಿನ ಗುರುವಾರ ಪೇಟ, ವಿಜಯಪುರದ ಕೆಎಚ್ಬಿ ಕಾಲನಿ, ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಹೊಮ್ಮನಹಳ್ಳಿ ಗ್ರಾಮಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಸೇನಾನಿಗಳಿಗೆ ಕರೊನಾ ಕಾಟ
ಕರೊನಾ ಹವಾಳಿ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಕರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರಿಗೂ ಕರೊನಾ ಕಾಟ ಶುರುವಾಗಿದ್ದು, ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕೆಲ ದಿನಗಳ ಹಿಂದೆ ಗರಗ ಪೊಲೀಸ್ ಠಾಣೆ ಪಿಎಸ್ಐಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಠಾಣೆಯ 5ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಪೊಲೀಸ್ ಠಾಣೆ ಮಾತ್ರವಲ್ಲದೆ ಕಲಘಟಗಿ ರಸ್ತೆಯಲ್ಲಿನ ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳಿಗೂ ಸೋಂಕು ತಗುಲಿದೆ. ಮಂಗಳವಾರ 16 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಆತಂಕ ಹೆಚ್ಚಾಗಿದೆ.
ಗರಗ ಪೊಲೀಸ್ ಠಾಣೆ ಸೀಲ್ಡೌನ್
ಉಪ್ಪಿನಬೆಟಗೇರಿ: ಗರಗ ಪೊಲೀಸ್ ಠಾಣೆಯ ಪಿಎಸ್ಐ, ಎಎಸ್ಐ ಸೇರಿ ಐವರು ಪೊಲೀಸರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಮಂಗಳವಾರ ಸೀಲ್ಡೌನ್ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಕೆಲ ಠಾಣೆಗಳಲ್ಲಿ ಒಬ್ಬರು, ಇಬ್ಬರು ಪೊಲೀಸರಿಗೆ ಕರೊನಾ ಪಾಸಿಟಿವ್ ಬಂದಿತ್ತು. ಆದರೀಗ ಗರಗ ಠಾಣೆಯೊಂದರಲ್ಲೇ ಐವರಿಗೆ ಕೋವಿಡ್ ಸೋಂಕು ತಗುಲಿದೆ.
ಈ ಠಾಣೆಯ ಪಿಎಸ್ಐಗೆ ಮೊದಲು ಪಾಸಿಟಿವ್ ದೃಢಪಟ್ಟಿತ್ತು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಠಾಣೆಯ 10 ಸಿಬ್ಬಂದಿಯನ್ನು ಮಂಗಳವಾರ ತಪಾಸಣೆಗೆ ಒಳಪಡಿಸಲಾಗಿತ್ತು.
ಕರೊನಾದಿಂದ 6 ಜನ ಸಾವು
ಧಾರವಾಡ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಜಿಲ್ಲೆಯ ನಾಲ್ವರು ಹಾಗೂ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ತಲಾ ಒಬ್ಬರು ಸೇರಿ ಒಟ್ಟು ಆರು ಜನ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು, ಮತ್ತಿತರ ಲಕ್ಷಣಗಳನ್ನು ಹೊಂದಿದ್ದ ಧಾರವಾಡ ಟೋಲ್ನಾಕಾ ಬಳಿಯ 60 ವರ್ಷದ ವೃದ್ಧೆ, ಹುಬ್ಬಳ್ಳಿ ಮಂಟೂರ ರಸ್ತೆ ಕೃಪಾನಗರ ಅರಳಿಕಟ್ಟಿ ಕಾಲನಿಯ 64 ವರ್ಷದ ವೃದ್ಧ, ರ್ಕ ಬಸವೇಶ್ವರ ನಗರದ 64 ವರ್ಷದ ವೃದ್ಧೆ, ಹಳೇಹುಬ್ಬಳ್ಳಿ ಅಯೋಧ್ಯಾನಗರದ 72 ವರ್ಷದ ವೃದ್ಧೆ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಚಿಕ್ಕುಂಬಿ ಗ್ರಾಮದ 78 ವರ್ಷದ ವೃದ್ಧೆ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ 50 ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.