ಬಾಗಲಕೋಟೆ ನಗರದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಜಿಲ್ಲೆ

ಬೆಂಬಲಿಗರಲ್ಲಿ ಸಿಎಂ ಹಂಬಲವಿದೆ

ಬಾಗಲಕೋಟೆ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉಳಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಿಎಂಗೆ ಬೆಂಬಲ ಕೊಡುತ್ತೇವೆ ಎನ್ನುವವರಲ್ಲಿಯೇ ತಾವು ಸಿಎಂ ಆಗಬೇಕು ಎನ್ನುವ ಹಂಬಲ ಹೊಂದಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಮೇಲೆ ಹಲವರ ಕಣ್ಣಿದೆ. ಇದು ಸ್ವಾಭಾವಿಕ ಸಹ. ಈಗ ಕೋರ್ಟ್ನಲ್ಲಿ ತೀರ್ಪು ಏನು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಹಳಷ್ಟು ಜನರು ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಯಲಿಕ್ಕಿಲ್ಲ ಎಂದುಕೊಂಡಿದ್ದಾರೆ. ಆಕಸ್ಮಾತ್ ತೀರ್ಪುನಲ್ಲಿ ಸಿದ್ದರಾಮಯ್ಯ ಅವರ ತಪ್ಪಿದೆ ಎಂದು ಎ-ï‌ಐಆರ್ ಬಿದ್ದರೆ ರಾಜೀನಾಮೆ ಕೊಡಬೇಕಾಗಬಹುದು. ಆಗ ಸಿದ್ದರಾಮಯ್ಯ ಇಷ್ಟಪಡುವ ವ್ಯಕ್ತಿ ಸಿಎಂ ಆಗಲು ಬಿಡುತ್ತಾರಾ? ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ ಸೇರಿ ಹಲವರಿಗೆ ಅವಕಾಶ ಸಿಗದಿದ್ದರೆ ಸರ್ಕಾರ ಎಷ್ಟರ ಮಟ್ಟಿಗೆ ಇರುತ್ತೆ, ಇರುವುದಿಲ್ಲ ಗೊತ್ತಿಲ್ಲ. ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ತೀರ್ಮಾನ ಆಗಲಿದೆ ಎಂದರು.

ಕೇಂದ್ರದಲ್ಲಿ ಎಚ್ಡಿಕೆ ಪ್ರಾಬಲ್ಯ ಜಾಸ್ತಿ ಆಗುತ್ತಿದೆ. ಇದರಿಂದ ಬಿಜೆಪಿ ಏನಾದರೂ ಜೆಡಿಎಸ್‌ನಲ್ಲೆ ಮರ್ಜ್ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಬಿಜೆಪಿ ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಹಿಂದು ಸಂಸ್ಕೃತಿಯನ್ನು ಉಳಿಸುವ ಏಕೈಕ ಪಕ್ಷ ಬಿಜೆಪಿ. ದೇಶದ ಪ್ರಧಾನಿ, ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿ, ಶಾಸಕರು, ಸಂಸದರು ಇರಲು ಕಾರಣವೇ ಹಿಂದು ಸಂಸ್ಕೃತಿ. ಇವತ್ತು, ನಿನ್ನೆ ಯಾರೋ ಮಾಡುತ್ತಿರುವ ಪ್ರಯತ್ನದಿಂದ ಬಿಜೆಪಿ ಅಽಕಾರಕ್ಕೆ ಬಂದಿದ್ದಲ್ಲ. ಅನೇಕ ವರ್ಷಗಳಿಂದ ಪಕ್ಷಕ್ಕೆ ರಕ್ತ, ಬೆವರು ಸುರಿಸಿ ರಾಷ್ಟ್ರಭಕ್ತರು ಕಟ್ಟಿರುವ ಪಕ್ಷ ಬಿಜೆಪಿ. ಧರ್ಮ ನಿಷ್ಠರು ಪಕ್ಷವನ್ನು ಕಟ್ಟಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಪಕ್ಷ ಕೆಲವರ ಕುಟುಂಬದವರ ಕೈಗೆ ಸಿಕ್ಕಿದೆ. ಇದು ಖಂಡಿತಾ ಸರಿಯಾಗುತ್ತದೆ, ಈ ಬಗ್ಗೆ ಯಾವುದೇ ಅನುಮಾನ ಬೇಡ. ದೇಶಕ್ಕೆ ಇರುವ ಒಂದೇ ಆಶಾಕಿರಣ ಬಿಜೆಪಿ ಎಂದು ಹೇಳಿದರು.