ಜಿಲ್ಲೆ

ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ

ಕಲಬುರಗಿ: ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಈಗಾಗಲೇ ಬಿಜೆಪಿ ರಾಷ್ಟಿçÃಯ ಅಧ್ಯಕ್ಷರು, ನಾನು ಪ್ರತಿಕ್ರಿಯೆ ನೀಡಿದ್ದು, ಪದೇ ಪದೆ ಹೇಳುವುದಿಲ್ಲ. ದೌರ್ಜನ್ಯದ ವಿರುದ್ಧ ನಾವು ಸದಾ ಇರುವುದು ಸ್ಪಷ್ಟವಾಗಿದೆ. ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಮಾಧ್ಯಮದವರೊಂದಿಗೆ ಮಂಗಳವಾರ ನಗರದಲ್ಲಿ ಮಾತನಾಡಿ, ಈಗಾಗಲೇ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಕಾನೂನು ಪ್ರಕಾರ ಕ್ರಮವಾಗಲಿದೆ ಎಂದು ಹೇಳಿದರು.