ಜಿಲ್ಲೆ

ಬೆಂಕಿ ಅವಘಡಕ್ಕೆ 11ಬೈಕ್ ಭಸ್ಮ

ಕಲಬರಗಿ: ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿನ ವಾಹನ ಸರ್ವಿಸ್ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ೧೧ ಬೈಕ್ ಸುಟ್ಟ ಘಟನೆ ಸೋಮವಾರ ನಡೆದಿದೆ. ಮಲ್ಲೇಶ ಹಾಗೂ ನಾಗೇಶ ಲಾಡೆ ಅವರ ಆಟೋಮೊಬೈಲ್ ಹಾಗೂ ಸರ್ವಿಸ್ ಸೆಂಟರ್‌ಗೆ ಬೆಂಕಿ ತಗುಲಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.