ಜಿಲ್ಲೆ

ಬೃಹತ್ ರಕ್ತದಾನ ಶಿಬಿರ

Dharwada - Vikram Nadiger

ಧಾರವಾಡ: ಸೇವಾ ಭಾರತಿ ರಜತ ಮಹೋತ್ಸವ, ಸ್ವಾತಂತ್ರೊೃೀತ್ಸವ ಹಾಗೂ ಶ್ರೀ ಮಹರ್ಷಿ ಅರವಿಂದರ 151ನೇ ಜನ್ಮ ದಿನ ನಿಮಿತ್ತ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಹುಬ್ಬಳ್ಳಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ಆ. 9ರಂದು ನಗರದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಬನ್ನಿ ದೇಶಕ್ಕಾಗಿ ರಕ್ತದಾನ ಮಾಡೋಣ ಎಂಬ ಘೋಷಣಾ ವಾಕ್ಯದೊಂದಿಗೆ ನಗರದ ಹಳಿಯಾಳ ರಸ್ತೆಯ ಲಿಂಗಾಯತ ಭವನದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ನಯಾನಗರದ ಶ್ರೀ ಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಸೇವಾ ಭಾರತಿ ಟ್ರಸ್ಟ್‌ನ 25ನೇ ವರ್ಷದ ಪ್ರಯುಕ್ತ ವಿವಿಧ ಸಮಾಜಪರ ಚಟುವಟಿಕೆ ಏರ್ಪಡಿಸಲಾಗಿದೆ. ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹೀಗೆ ವಿವಿಧ ಸಾಮಾಜಿಕ ಸೇವಾ ಕಾರ್ಯ ನಡೆಯುತ್ತಿದ್ದು, ಆ. 9ರ ರಕ್ತದಾನ ಶಿಬಿರದಲ್ಲಿ 1 ಸಾವಿರ ಜನರು ರಕ್ತದಾನ ಮಾಡುವ ನಿರೀಕ್ಷೆ ಇದೆ. ಆಸಕ್ತರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.