ಚಿತ್ರದುರ್ಗ: ಸದ್ಯದಲ್ಲೇ ಎದುರಾಗಿರುವ ಲೋಕಸಭಾ ಚುನಾವಣೆಗೆ ಪಕ್ಷದ ಕಾರ‌್ಯಕರ್ತರು ಈಗಿನಿಂದಲೇ ಸಜ್ಜಾಗ ಬೇಕಿದೆ ಎಂದು,ಲೋಕಸಭಾ ಕ್ಷೇತ್ರದ ಪಕ್ಷದ ಸಂಚಾಲಕ,ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ಕಾರ‌್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ಪ್ರತಿಬೂತ್‌ಮಟ್ಟದಲ್ಲೂ ಪಕ್ಷವನ್ನು ಬಲಪಡಿಸಬೇಕು.
ದೇಶಾದ್ಯಂತ ಬಿಜೆಪಿ ಪರ ಅಲೆ ವ್ಯಾಪಕವಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನರಿಗೆ ನೀಡಿರುವ ಹತ್ತು ಹಲವು ಮಹಾತ್ವಾಕಾಂಕ್ಷಿ ಯೋಜನೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲ ಸವನ್ನು ಮಾಡಬೇಕಿದೆ ಎಂದು ಕಾರ‌್ಯಕರ್ತರಿಗೆ ಸೂಚಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಉದ್ಘಾಟಿಸುವ ಮೂಲಕ ಮೋದಿ ಅವರು ಹಿಂದುಗಳ ಐದು ನೂರು ವರ್ಷಗಳ ಕನಸನ್ನು ಸಾಕಾರ ಮಾಡಿದ್ದಾರೆ.ಮಂದಿರ ನಿರ್ಮಾಣದಿಂದ ಇಡೀ ಪ್ರಪಂಚವೇ ಇಂದು ಭಾರತದೆಡೆ ನೋಡುವಂತಾಗಿದ್ದು, ಮುಂದಿನ ಚುನಾವಣೆಯಲ್ಲಿ ಮೋ ದಿ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು. ಡಾ.ಸಿದ್ದಾರ್ಥ ಗುಂಡಾರ್ಪಿ,ನರೇಂದ್ರಹೊನ್ನಾಳ್, ಶಿವಣ್ಣ,ಸುರೇಶ್‌ಸಿದ್ದಾಪುರ,ನವೀನ್‌ಚಾಲುಕ್ಯ,ಸಂಪತ್‌ಕುಮಾರ್,ಶೈಲೇಶ್,ಕಲ್ಲೇಶಯ್ಯ,ಮಂಡಲ ಅಧ್ಯಕ್ಷರು,ಪದಾಧಿಕಾರಿಗಳು ಇದ್ದರು.