ಜಿಲ್ಲೆ

ಬುದ್ಧಿಮಾಂದ್ಯ ಮಕ್ಕಳಿಂದ ಸ್ಪೋರ್ಟ್ಸ್ ಪಾರ್ಕ್​ಗೆ ಚಾಲನೆ

ಹುಬ್ಬಳ್ಳಿ: ಇಲ್ಲಿನ ಕುಸುಗಲ್ ರಸ್ತೆ ಬಳಿಯ ‘ಸ್ಪೋರ್ಟ್ಸ್ ಪಾರ್ಕ್’ಗೆ ಗೋಪನಕೊಪ್ಪದ ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ನಿಲಯದ ವಿದ್ಯಾರ್ಥಿಗಳು ಭಾನುವಾರ ಚಾಲನೆ ನೀಡಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಎಂಎಲ್​ಸಿ ಪ್ರದೀಪ ಶೆಟ್ಟರ್ ಅವರು ಆಗಮಿಸಿ, ಅಚ್ಚುಕಟ್ಟಾಗಿ ನಿರ್ವಿುಸಿದ ಸ್ಪೋರ್ಟ್ಸ್ ಪಾರ್ಕ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶಾಲ ಜಾಗದಲ್ಲಿ ನಿರ್ವಿುಸಿರುವ ಪಾರ್ಕ್​ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವಿದೆ. ಇಲ್ಲಿ ಟರ್ಫ್ ಕ್ರಿಕೆಟ್, ಫುಟ್​ಬಾಲ್, ವಾಲಿಬಾಲ್, ಕಬಡ್ಡಿ, ಟ್ರ್ಯಾಂಪೋಲಿನ್ ಪಾರ್ಕ್, ಸೋಪ್ ಫುಟ್​ಬಾಲ್, ಜಾರ್ಬಿಂಗ್ ಬಾಲ್, ಸ್ನೂಕರ್, ಟೇಬಲ್ ಟೆನಿಸ್, ಕೇರಂ, ಎಟಿವಿ ಬೈಕ್ ಮೈದಾನವಿದೆ. ಸುಮಾರು 25ರಿಂದ 30 ಆಟಗಳನ್ನಾಡಲು ಅನುಕೂಲವಿದೆ. ಎಲ್ಲ ವಯೋಮಾನದವರು ಭಾಗವಹಿಸಬಹುದು ಎಂದು ಮುಖ್ಯಸ್ಥ ಪ್ರದೀಪ್ ಜೈನ್ ತಿಳಿಸಿದರು.

ಪಾಲುದಾರರಾದ ರಾಜನ್ ಜೈನ್, ಆಶೀಶ್ ನಹಾಟ, ದಾನೇಶ್ ಕಟಾರಿಯಾ, ಚಿರಾಗ್ ಭಂಡಾರಿ, ಜೈನ್ ಸಮಾಜದ ಮುಖಂಡರಾದ ಭವರಲಾಲ್ ಜೈನ್, ಸುರೇಶ ಜೈನ್, ಮಾರುತಿ ಬಿಲ್ಸರ್ಸ್​ನ ಪ್ಯಾರೆಲಾಲ್ ಪಿತಲಿಯಾ, ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ನಿಲಯ ಮುಖ್ಯಸ್ಥ ಡಾ.ಜೆ.ಕೆ. ಹಿರೇಮಠ ಇತರರು ಇದ್ದರು.