ಜಿಲ್ಲೆ

ಬುದ್ಧನ ವಿಚಾರಕ್ಕೆ ಪಾಲಿ ಅಧ್ಯಯನ ಅವಶ್ಯ

ಕಲಬುರಗಿ: ಪಾಲಿ ಭಾಷೆಗೆ ಸಂಸ್ಕೃತಿ ಸಂಸ್ಕಾರವಿದ್ದು, ಜಗತ್ತಿನ ಅಧ್ಯಯನ ಭಾಷೆಯಾಗಿದೆ. ಬುದ್ಧನ ಕಾಲಘಟ್ಟ ಮತ್ತು ಬೌದ್ಧ ಧರ್ಮದ ವಿಚಾರಗಳನ್ನು ಆಳವಾಗಿ ತಿಳಿಯಲು ಪಾಲಿ ಭಾಷೆಯ ಅಧ್ಯಯನ ಪೂರಕವಾಗಲಿದೆ ಎಂದು ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು.
ಗುಲ್ಬರ್ಗ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪಾಲಿ ಇನ್‌ಸ್ಟಿಟ್ಯೂಟ್ ನಳಂದ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಪಿಯುಸಿ ಕಾಲೇಜುಗಳ ಉಪನ್ಯಾಸಕರಿಗೆ ಎರಡು ದಿನದ ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಕ್ರಮದಲ್ಲಿ ಬುಧವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬುದ್ಧ ಮತ್ತು ಬೌದ್ಧ ಧರ್ಮದ ನೆಲೆಗಳ ಅಥವಾ ಬೆಳವಣಿಗೆಗಳ ಸಂಸ್ಕೃತಿಯನ್ನು ಗಮನಿಸಿದಾಗ ಪಾಲಿ ಭಾಷೆಗೆ ತನ್ನದೇ ಆದ ಸಂಸ್ಕೃತಿಯ ಜೊತೆಯಲ್ಲಿ ಸಂಸ್ಕಾರವು ಇದೆ ಎಂದು ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರï ದಯಾನಂದ ಅಗಸರ ಅಭಿಮತ ವ್ಯಕ್ತ ಪಡಿಸಿದರು.
ಬೌದ್ಧ ವಿದ್ವಾಂಸ ತಂತ್ರಾAಶ ಪರಿಣಿತ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಕೆ.ಪಿ.ರಾವ ಮಾತನಾಡಿ, ಬೋದಿ ವೃಕ್ಷದ ಕೆಳಗೆ ಕುಳಿತು ಜ್ಞಾನೋದಯ ಪಡೆದ ಸಂದರ್ಭ ವರ್ಣಿಸಲು ಅಸಾಧ್ಯ. ಆ ಅನುಭವವನ್ನು ಬುದ್ಧ ತತ್ವದಲ್ಲಿ ಪಡೆದು ನಮ್ಮ ಅಸ್ತಿತ್ವ ಹುಡುಕಲು ಪ್ರಯತ್ನಿಸಬೇಕು ಎಂದರು.
ನಳAದ ಪಾಲಿ ಇನ್‌ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ.ಮ¯್ಲÉಪುರಂ ವೆಂಕಟೇಶ ಮಾತನಾಡಿ, ಪ್ರಸ್ತುತ ಎಲ್ಲೆಡೆ ಪಾಲಿ ಭಾಷೆಯ ಅಧ್ಯಯನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟಿçÃಯ ತೌಲನಿಕ ಅಧ್ಯಯನ ಸಂಸ್ಥೆಯಿAದ ಹಲವು ಸರ್ಟಿಫಿಕೇಟ್ ಕೋರ್ಸ್ಗಳ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಕರ್ನಾಟಕದಲ್ಲಿ ಪಾಲಿ ಮತ್ತು ಬೌದ್ಧ ಅಧ್ಯಯನ ಕುರಿತು ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಅವಕಾಶಗಳಿಲ್ಲ. ಅದು ಗುವಿವಿಯಲ್ಲಿ ಮಾತ್ರ ಇದೆ. ೨೦೦೮ರಿಂದ ಸಂಸ್ಥೆಯಿAದ ಅಧ್ಯಯನ ಆರಂಭಿಸಲಾಗಿದೆ. ಪಾಲಿ ಮತ್ತು ಬೌದ್ಧ ವಿಷಯಗಳ ಕುರಿತು ಸಮ್ಮೇಳನ ಸೇರಿ ವಿವಿಧ ಕಾರ್ಯಗಾರ ಮಾಡಲಾಗಿದೆ. ಬೌದ್ಧ ಸಂಪುಟ ಹೊರತರಲಾಗಿದೆ. ಪಾಲಿ ಮತ್ತು ಇತರೆ ಬೌದ್ಧ ತತ್ವದ ಕುರಿತು ಕನ್ನಡದಲ್ಲಿ ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದರು.
ಪ್ರಮುಖರಾದ ರಮೇಶ ಬೇಗಾರ, ಗುವಿವಿ ಕುಲಸಚಿವ ಪ್ರೊ.ರಾಜನಾಳ ಲಕ್ಷö್ಮಣಕರ್ ಇದ್ದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿ, ವಂದಿಸಿದರು.