ಯಾದಗಿರಿ: ಬುದ್ಧಗಯಾ ಕೂಡಲೇ ಬೌದ್ಧರಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಕರ್ನಾಟಕ ಉಪಾಸಕ ಮತ್ತು ಉಪಾಸಿಕಾ ಸಂಘದ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ್ದ ಸಾವಿರಾರು ಉಪಾಸಕ, ಉಪಾಸಿಕಾರು ಕೂಡಲೇ ಬಿಟ್ಟುಕೊಡುವಂತೆ ಘೋಷಣೆ ಕೂಗಿದರು. ನಂತರ ನೇತಾಜಿ ಸರ್ಕಲ್‌ವರೆಗೂ ಪಾದಯಾತ್ರೆ ಮೂಲಕ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸುಡುವ ಬಿಸಿಲು ಲೆಕ್ಕಿಸದೇ ಸುಮಾರು ಎರಡು ಗಂಟೆಗಳ ಕಾಲ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉz್ದೆÃಶಿಸಿ ಮಾತನಾಡಿದ ಸಂಘದ ಪ್ರಮುಖರಾದ ಸೂರ್ಯಕಾಂತ ನಿಂಬಾಳ್ಕರ್ ದೇವಿಂದ್ರ ಹೆಗಡೆ, ಹಣಮಂತ ಹಳಸಂಗಿ, ದೇಶದ ಸಂವಿಧಾನದ ಪ್ರಕಾರ ಎಲ್ಲ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿz್ದÁರೆ. ಆದರೆ ಬುದ್ದಗಯಾ ಟೆಂಪಲï ಆಕ್ಟ್ ೧೯೪೯ರ ಪ್ರಕಾರ ಬೌದ್ಧರಿಗೆ ವಿಹಾರ ನಿರ್ವಹಣೆ ಮಾಡಲು ಅಧಿಕಾರವಿಲ್ಲ, ಯಾಕೇ ಈ ತಾರತಮ್ಯ ಎಂದು ಅವರು ಪ್ರಶ್ನಿಸಿದರು.
ಬೌದ್ಧ ಸಮುದಾಯ ಮತ್ತು ಡಾ.ಅಂಬೇಡ್ಕರ್ ಅನುಯಾಯಿಗಳು ಸಂವಿಧಾನ ದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿz್ದÁರೆ. ರಾಷ್ಟç ಮಟ್ಟದಲ್ಲಿ ಹಲವು ಸುತ್ತಿನ ಹೋರಾಟ ಮಾಡಿದರೂ ಕೂಡ ಬಿಟಿ ಆಕ್ಟ್ ೧೯೪೯ರ ಕಾಯ್ದೆಯಲ್ಲಿ ಹಾಗೂ ಬಿಟಿಎಂಸಿಯಲ್ಲಿ ಕೆಲವು ಬದಲಾವಣೆಗಳು ಮಾಡಲಾಯಿತೇ ಹೊರತು ಪೂರ್ಣವಾಗಿ ಕಾಯ್ದೆ ರದ್ದು ಆಗಲಿಲ್ಲ ಎಂದು ಅವರು ದೂರಿದರು.
ಈ ಸಂಬAಧ ೨೦೧೨ರಿಂದ ಬೌದ್ಧರು ಸುಪ್ರೀಂ ಕೋರ್ಟ್ನಲ್ಲಿ ಬೌದ್ಧ ಸಂಘ-ಸAಸ್ಥೆಗಳನ್ನು ಹಾಗೂ ದೇಶದ ಅಂಬೇಡ್ಕರ್ ಅನುಯಾಯಿಗಳನ್ನು ಒಂದೇ ವೇದಿಕೆಗೆ ಕರೆತಂದು ಹೋರಾಟವನ್ನು ಪುನಃ ಆರಂಭಿಸಿ ಇಂದಿಗೆ ೫೦ಕ್ಕೂ ಹೆಚ್ಚು ದಿನಗಳು ಗತಿಸಿದರೂ ಕೇಂದ್ರ ಮತ್ತು ಬಿಹಾರ ರಾಜ್ಯದ ಸರ್ಕಾರ ಬೌದ್ಧ ಭಿಕ್ಕೂ ಸಂಘಕ್ಕೆ ಮತ್ತು ಬೌದ್ಧ ಅನುಯಾಯಿಗಳಿಗೆ ಅನ್ಯಾಯ ಮಾಡುತ್ತಿದೆ ದೂರಿದರು.
ಈ ಹಿನ್ನೆಲೆಯಲ್ಲಿ ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವುದಕ್ಕಾಗಿ ಸಂವಿಧಾನದ ಕಲಂ. ೧೩, ೨೫, ಮತ್ತು ೨೯ ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿಟಿ ಆಕ್ಟ್ ೧೯೪೯ ಅನ್ನು ರದ್ದು ಪಡಿಸಿ, ಬುದ್ಧಗಯಾ ಮಹಾದೋಧಿ ಮಹಾವಿಹಾರದ ಆಡಳಿತ ಮಂಡಳ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.