ಕಲಬುರಗಿ: ನಗರದ ಕೆಎಚ್ಬಿ ಗ್ರೀನ್ನ ದಣಮುಖಿ ಶ್ರೀ ಆಂಜನೇಯ ದೇವಸ್ಥಾನ ಆವರಣದ ಎದುರು ಮೇ ೧೪ರಂದು ಸಂಜೆ ೬ಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಡಾ.ಜಗಜೀವನರಾಮ್ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೆಎಚ್ಬಿ ಗ್ರೀನ್ ಪರ‍್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಹೇಳಿದರು.
ಪರ್ಕ್ನಲ್ಲಿರುವ ಎಲ್ಲ ಜಾತಿ, ಸಮುದಾಯದವರು ಒಗ್ಗೂಡಿ ಜಯಂತಿ ಆಚರಿಸುತ್ತಿದ್ದು, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಶ್ರೀ ಡಾ.ಸಿದ್ದರಾಮ ಬೆಲ್ದಾಳ ಶರಣರು, ಶ್ರೀ ಕೋರಣೇಶ್ವರ ಸ್ವಾಮೀಜಿ, ಡಾ.ದಾಾಯಿಣಿ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಖನೀಜ್ ಾತಿಮಾ, ಬಸವರಾಜ ಮತ್ತಿಮಡು, ಮೇಯರ್ ಯಲ್ಲಪ್ಪ ನಾಯ್ಕೋಡಿ, ಪೊಲೀಸ್ ಕಮೀಷನರ್ ಡಾ.ಶರಣಪ್ಪ ಢಗೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮಂಗಳಾ ವಿ.ಕಪರೆ, ಡಾ.ಅನೀಲ ಟೆಂಗಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಯಂತಿ ನಿಮಿತ್ತ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಯಲಿದೆ. ನೇತ್ರದಾನ, ದೇಹದಾನವನ್ನು ಮಾಡಲಿದ್ದಾರೆ. ಸಂಜೆ ೪ಕ್ಕೆ ಸಂಗೀತ ಗಾಯನ ಕರ‍್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಲ್ಲಿಕರ‍್ಜುನ ಹುಲೇಕರ, ದಶವಂತ ಕಣಮಸ್ಕರ್, ಹಣಮಂತರಾವ ಅಟ್ಟೂರು, ಸಂಗಮೇಶ ಸರಡಗಿ, ಬಾಲಕೃಷ್ಣ ಕುಲ್ರ‍್ಣಿ ಇತರರಿದ್ದರು.