ಜಿಲ್ಲೆ

ಬುದ್ಧ ಧಮ್ಮಾವನ್ನು ಪ್ರತಿಹಳ್ಳಿಗೂ ಮುಟ್ಟಿಸಿ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣದ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಆಯೋಜಿಸಿರುವ ಭೀಮ್‌ಜ್ಯೋತಿ ರ್ಯಾಲಿಗೆ ಕೊಳ್ಳೇಗಾಲದ ಜೇತವನದ ಬೌದ್ಧಭಿಕ್ಕು ಸುಗತಪಾಲ ಚಾಲನೆ ನೀಡಿದರು.

ತಾಲೂಕಿನ ಜ್ಯೋತಿಗೌಡನಪುರದ ಜಿಲ್ಲೆಯ ಮೊಟ್ಟಮೊದಲ ಲುಂಬಿನಿ ಬುದ್ಧ ವಿಹಾರದಲ್ಲಿ ಸಾಮೂಹಿಕ ಬುದ್ಧವಂದನೆ ಸಲ್ಲಿಸಿ,

ಚಾಲನೆಗೊಂಡ ಭೀಮ್‌ ಜ್ಯೋತಿ ರ್ಯಾಲಿಯು ನಾಗವಳ್ಳಿ ಚಂದಕವಾಡಿ, ದಡದಹಳ್ಳಿ,ಹೆಬ್ಬಸೂರು,ಪ ಸಿದ್ಧಯ್ಯನಪುರ ಕೋಡಿಉಗನೆ ಮಲಯ್ಯನಪುರ ಯಡಪುರ. ರಾಮಸಮುದ್ರದ ಸಂಚರಿಸಿ. ಜಾಗೃತಿ ಮೂಡಿಸಿ ಸಾರನಾಥ ಬೌದ್ಧ ಬಿಹಾರದಲ್ಲಿ ಮುಕ್ತಾಯಗೊಂಡಿತು.

ಭೀಮ್ ಜ್ಯೋತಿ ರ್ಯಾಲಿಗೆ ಚಾಲನೆ ನೀಡಿದ ಬೌದ್ಧಭಿಕ್ಕು ಸುಗತಪಾಲ ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರ ಸಂದೇಶಗಳ ಅರಿವು ಮೂಡಿಸಲು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆಯ ಅಯೋಜಿಸಿರುವ ಭೀಮ್ ಜ್ಯೋತಿ ರ್ಯಾಲಿಯು ಪ್ರತಿ ಗ್ರಾಮಗಳಿಗೂ ತೆರಳಿ ಪ್ರತಿಮನೆಮನೆಯಲ್ಲೂ ಪಸರಿಸಲಿ. ಬುದ್ಧಧಮ್ಮಾವನ್ನು ಹಳ್ಳಿಹಳ್ಳಿಗೂ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆ‌ರ್.ಬಸವರಾಜು ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರು ಆಶಯಗಳನ್ನು ಜಿಲ್ಲೆಯ ಮೊಟ್ಟಮೊದಲ ಲುಂಬಿನಿ ಬುದ್ಧವಿಹಾರದಿ ಂದಲ್ಲೇ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಭೀಮ್ ಜ್ಯೋತಿ ರ್ಯಾಲಿ ಹಮ್ಮಿಕೊಂಡಿದ್ದು, ರ್ಯಾಲಿಯು ಇಲ್ಲಿಂದ ನಾಗವಳ್ಳಿ, ಚಂದಕವಾಡಿ, ದಡದಹಳ್ಳಿ, ಸಿದ್ದಯ್ಯನಪುರ, ಕೋಡಿಉಗನೆ, ಮಲ್ಲಯ್ಯನಪುರ, ಯಡಪುರ, ರಾಮಸಮುದ್ರ, ಸಾರನಾಥ ಬೌದ್ಧ ವಿಹಾರಕ್ಕೆ ಸಂಜೆ ತೆರಳಿ ಮುಕ್ತಾಯಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕ್ ಯಲಕ್ಕೂರು ಉಮೇಶ್ ಕುದರ್ ನಿವೃತ ಪ್ರಾಂಶುಪಾಲ ಶಿವಣ್ಣ, ಕಾರ್ಯದರ್ಶಿ ನಂಜುಂಡಯ್ಯ ಜ್ಯೋತಿಗೌಡನಪುರದ ಯಜಮಾನರಾದ ಕೇಶವಮೂರ್ತಿ ಸಿದ್ದಯ್ಯ ಕೆಂಪ... ಮಾದಯ್ಯನವರ .ಕುಟುಂಬ ವರ್ಗ ಹಾಗೂ.ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.