ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕನರ್ಾಟಕ ಕಲಾವಿದರ ಒಕ್ಕೂಟದಿಂದ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ಕಾರ್ಯದಶರ್ಿ ಪ್ರಕಾಶ ಅಂಗಡಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಸೇರಿ ಹಲವು ಪ್ರಕಾರದ ಕಲಾವಿದರು ನಿರಂತರವಾಗಿ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲೂ ಸಹ ಅನೇಕ ಪ್ರತಿಭಾವಂತರಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ತಮ್ಮ ಕಲೆ ಪ್ರದಶರ್ಿಸಿ ಬಂದಿದ್ದಾರೆ. ಆದರೂ ಸಹ ರಾಜ್ಯ ಸರಕಾರಿ ಕಡೆಗಣಿಸುತ್ತಿರುವುದು ವಿಷಾಧನೀಯ ಸಂಗತಿ ಎಂದರು.
ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸಕರ್ಾರದ ಹಲವು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಕನ್ನಡದ ಕಟ್ಟಾಳು ದಿ.ಎಂ.ಆರ್.ಬುದ್ದಿವಂತ ಶೆಟ್ಟಿ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಹಾಗೂ ಹಲಸಂಗಿ ಪರಿಸರದ ಜನಪದ ಕವಿಗಳ ಪ್ರತಿಷ್ಠಾನ ಮಾದರಿಯಲ್ಲಿ ಜಿಲ್ಲೆಯ ಅಮ್ಮಾಪೂರ ಪರಿಸರದ ಜನಪದ ಕವಿಗಳ ಪ್ರತಿಷ್ಠಾನ ಸ್ಥಾಪಿಸಬೇಕು. ಕಲ್ಯಾಣ ಕನರ್ಾಟಕ ಭಾಗದ ಪ್ರಸಿದ್ದ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಅಭಿವೃದ್ಧಿ ಪ್ರಾಕಾರ ರಚನೆಗೆ ಸಕರ್ಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಂಪಿ ಉತ್ಸವದ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸಗರನಾಡು ಉತ್ಸವವನ್ನು ಸರಕಾರದಿಂದ ಆಯೋಜಿಸಬೇಕು. ವಿಶೇಷವಾಗಿ ರಾಜ್ಯ ಸಕರ್ಾರ ಈಗಾಗಲೇ ಮೈಸೂರು ಮತ್ತು ಬೆಂಗಳೂರು ವಿಭಾಗದ ಕಲಾವಿದರಿಗೆ ನಿಡುತ್ತಿರುವ ಗುರುತಿನ ಚೀಟಿಯನ್ನು ಕಲ್ಯಾಣ ಭಾಗದ ಕಲಾವಿದರಿಗೂ ವಿತರಿಸಬೇಕು ಎಂದು ಆಗ್ರಹಿಸಿದರು.