ಜಿಲ್ಲೆ

ಬುದ್ದಿ ಹೇಳಿದ್ದಕ್ಕೆ ಯುವತಿ ನೇಣಿಗೆ ಶರಣು

ಕಲಬುರಗಿ: ಮನೆಯ ಕೆಲಸ ಮಾಡುವಂತೆ ತಾಯಿ ಬುದ್ದಿವಾದ ಹೇಳಿದಕ್ಕೆ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಗುರುವಾರ ನಡೆದಿದೆ. ನಗರದ ಅಂಬೇಡ್ಕರ್​ ಕಾಲೊನಿ ನಿವಾಸಿ ಪುತಳಾಬಾಯಿ ಸಂತೋಷ ಕಟ್ಟಿಮನಿ (೧೮) ಆತ್ಮಹತ್ಯೆ ಮಾಡಿಕೊಂಡ ಯುವತಿ. ಗುರುವಾರ ಸಂಜೆ ವೇಳೆ ಮನೆಯ ಕೆಲಸ ಮಾಡುವಂತೆ ತಾಯಿ ಬುದ್ದಿವಾದ ಹೇಳಿದ್ದಳು. ಇದರಿಂದ ಅಡುಗೆ ಮನೆಯ ್ಯಾನ್​ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ವಿಜಯಲಕ್ಷಿ$್ಮ ಚೌಕ್​ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.