ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ದೊಡ್ಡಪ್ಪಗೋಳ ತೋಟದ ವಸತಿ ಪ್ರದೇಶದಲ್ಲಿರುವ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವವು ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವರ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಬಳಿಕ ಮಲಾಬಾದ ಸತ್ಯಸಿದ್ಧರು, ಕಿರಣಗಿಯ ಮಾಳಿಂಗರಾಯ ದೇವರು ಹಾಗೂ ಬಳ್ಳಿಗೇರಿ ಗ್ರಾಮದ ಬೀರಸಿದ್ಧೇಶ್ವರ ದೇವರ ಪಲ್ಲಕ್ಕಿಗಳ ಮೆರವಣಿಗೆ ಮಾಡಲಾಯಿತು. ಮಾಳಿಂಗರಾಯರ ಅಲಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ಭಂಡಾರ ಹಚ್ಚಿಕೊಂಡು ಕುಣಿದು ಕುಪ್ಪಳಿಸಿದರು. ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ಕಲಾಪ್ರದರ್ಶನ ಜರುಗಿತು.
ಅರ್ಚಕ ಪದ್ಮಪ್ಪ ಬೆಳಗಲಿ, ಈರಪ್ಪ ಪೂಜಾರಿ, ಶಿವಪ್ಪ ಬೆಳಗಲಿ, ಹಣಮಂತ ಕಾರಜಣಗಿ, ಜಕ್ಕಪ್ಪ ಬೇವನೂರ, ಹಣಮಂತ ಯಂಗಾರೆ, ಸತ್ಯವ್ವ ಬೆವನೂರ, ವಿಮಲಾ ಯಂಗಾರೆ, ಗಂಗವ್ವ ವಾಘಮೋರೆ, ಮಲ್ಲೇಶ ಪಡಸಲಗಿ, ಬಂಗಾರೆಪ್ಪ ಬೆಳಗಲಿ, ಕುಶಾಲ ಬೆವನೂರ ಇತರರಿದ್ದರು,