ಜಿಲ್ಲೆ

ಬೀರಗಲ್ಲೇಶ್ವರ ಕಾರ್ತಿಕೋತ್ಸವ 24ಕ್ಕೆ

ಚಿತ್ರದುರ್ಗ: ರಾಜಬೀದಿ ದೊಡ್ಡಪೇಟೆ ಕಂಬಳಿ ಬೀದಿಯಲ್ಲಿರುವ ಬೀರಗಲ್ಲೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಡಿ. 24ರಂದು ಬೀರಗಲ್ಲೇಶ್ವರ ಸ್ವಾಮಿ, ಪಾರ್ವತಿ ದೇವಿ, ಗಣಪತಿ, ವೀರಭದ್ರೇಶ್ವರ, ಆಂಜನೇಯ ಸ್ವಾಮಿಯ ಪ್ರಸಕ್ತ ಸಾಲಿನ ಕಡೇ ಕಾರ್ತಿಕ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.

ಸಂಜೆ 6ರಿಂದ 9ರವರೆಗೆ ಭಕ್ತರಿಗೆ ದೀಪ ಹಚ್ಚಲು ಅವಕಾಶ ಕಲ್ಪಿಸಲಾಗಿದೆ. ಸದ್ಭಕ್ತರೇ ದೀಪ, ಬತ್ತಿ ತಂದು ಹಚ್ಚುವ ಮೂಲಕ ಕಾರ್ತಿಕೋತ್ಸವ ಯಶಸ್ವಿಗೊಳಿಸಬೇಕು ಎಂದು ದೇಗುಲದ ಆಡಳಿತ ಮಂಡಳಿ ಕೋರಿದೆ.