ಜಿಲ್ಲೆ

ಬೀದಿನಾಯಿ ದಾಳಿಗೆ ಮೂರು ಕುರಿಗಳು ಬಲಿ

ಚಾಮರಾಜನಗರ: ತಾಲೂಕಿನ ಕೆಂಪನಪುರ ಗ್ರಾಮದಲ್ಲಿ ಮಂಗಳವಾರ ಬೀದಿನಾಯಿಗಳ ದಾಳಿಗೆ ಮೂರು ಕುರಿಗಳು ಮೃತಪಟ್ಟಿವೆ.

ಗ್ರಾಮದ ಸಣ್ಣಮಾದಯ್ಯ ಅವರು ಕುರಿಗಳನ್ನು ಊರಿನ ಹೊರ ವಲಯದ ಕೆರೆ ಬಳಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳ ಗುಂಪು ಕುರಿಗಳ ಗುಂಪಿನ ಮೇಲೆ ದಾಳಿ ನಡೆಸಿ ಸಾಯಿಸಿವೆ. ಇನ್ನು ಎರಡು ಕುರಿಗಳಿಗೆ ಗಾಯಗಳಾಗಿದೆ. ಸಂತೆಮರಳ್ಳಿ ಹೋಬಳಿಯ ಪಶು ಇಲಾಖೆಯ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ರೈತ ಸಣ್ಣಮಾದಯ್ಯ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯ ಮಾಡಿದ್ದಾರೆ.