ಯಾದಗಿರಿ: ಮುಡಾ ಹಗರಣವೇ ಅಲ್ಲ. ಆದರೂ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಗಂಭೀರ ಆರೋಪ ಮಾಡಿದರು.
ನಗರದ ನೇತಾಜಿ ಸರ್ಕಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಎತ್ತಿ ಹಿಡಿಯಬೇಕಿದ್ದ ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಕೈಗೊಂಬೆಯAತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ರಾಜ್ಯದ ಜನರು ಐದು ವರ್ಷ ಅವಧಿಗೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಗ್ಯಾರಂಟಿಗಳ ಮೂಲಕ ಜನಪರ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ವ್ಯವಸ್ಥಿತ ಸಂಚು ನಡೆದಿದೆ ಎಂದು ಕಿಡಿಕಾರಿದರು.
ಮಾಜಿ ಮಂತ್ರಿ ಬಾಬುರಾವ ಚಿಂಚನಸೂರ್ ಮಾತನಾಡಿ, ಜನಪರ ಕಾಳಜಿಯ ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಬಡವರು, ರೈತರು, ಕೃಷಿಕರ ಮತ್ತು ಕಾರ್ಮಿಕರ ಪರವಿರುವ ಅವರ ಹೆಸರನ್ನು ಉz್ದೆÃಶಪೂರ್ವಕವಾಗಿ ಮುಡಾ ಹಗರಣಕ್ಕೆ ತಳುಕು ಹಾಕಲಾಗಿದೆ ಎಂದು ಗುಡುಗಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, 15ನೇ ಸಲ ರಾಜ್ಯದ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಶುದ್ಧಹಸ್ತರು. ಎರಡು ಸಲ ಮುಖ್ಯಮಂತ್ರಿ, ಒಮ್ಮೆ ಉಪ ಮುಖ್ಯಮಂತ್ರಿ ಜತೆಗೆ ಅನೇಕ ಖಾತೆಗಳನ್ನು ನಿರ್ವಹಣೆ ಮಾಡಿರುವ ಇವರ ವಿರುದ್ಧ ಬಿಜೆಪಿ-ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡಿ ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ ಸೇಡಿನ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ, ಜಿಲ್ಲಾ ವಕ್ತಾರ ಶಾಮ್‌ಸನ್ ಮಾಳಿಕೇರಿ ಮಾತನಾಡಿದರು.
ಮುಖಂಡರಾದ ಶರಣಪ್ಪ ಸಲಾದಪುರ, ಡಾ.ಭೀಮಣ್ಣ ಮೇಟಿ, ರಮೇಶ ದೊರೆ ಅಲ್ದಾಳ್, ವಿನೋದ ಪಾಟೀಲ್, ಡಾ.ಶರಣಬಸಪ್ಪ ಕಾಮರಡ್ಡಿ, ಸುದರ್ಶನ ನಾಯಕ, ಚೆನ್ನಕೇಶವಗೌಡ ಕೆಂಗೂರಿ, ರಾಘವೇಂದ್ರ ಮಾನಸಕಲ್, ಮಂಜುನಾಥ ದಾಸನ್, ಹೊನ್ನೇಶ ದೊಡ್ಡಮನಿ, ಸಂಜು ಕಾವಲಿ, ವೆಂಕಟರಡ್ಡಿ ವನಕೇರಿ, ಗಣೇಶ ದುಪ್ಪಲ್ಲಿ, ಹಣಮಂತ ನಾಯಕ, ಸುರೇಶ ಮಡ್ಡಿ, ಶಾಂತಮ್ಮ ವಿಠಲ್ ಯಾದವ್, ಚಿದಾನಂದಪ್ಪ ಕಾಳಬೆಳಗುಂದಿ, ವಿಶ್ವನಾಥ, ನಿಂಗಣ್ಣ ಬಾಚಿಮಟ್ಟಿ, ಮಲ್ಲಿಕಾರ್ಜುನ ಇತರರು ಪಾಲ್ಗೊಂಡಿದ್ದರು. ಮೂರು ಪುಟದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟçಪತಿಗಳಿಗೆ ಸಲ್ಲಿಸಲಾಯಿತು.
ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೇತಾಜಿ ಸರ್ಕಲ್‌ನಲ್ಲಿ ಸಮಾವೇಶಗೊಂಡು ಕೆಲಕಾಲ ರಸ್ತೆ ತಡೆ ನಡೆಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ರಾಜ್ಯಪಾಲರು ಮತ್ತು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಎದ್ದು ಕಾಣಿಸಿದ ಶಾಸಕ ಚನ್ನಾರಡ್ಡಿ ಅನುಪಸ್ಥಿತಿ: ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪಿಎಸ್‌ಐ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಅವರ ಮತ್ತು ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದಾಗಿನಿಂದ ಶಾಸಕರು ನಗರದಲ್ಲಿ ಕಾಣಿಸುತ್ತಿಲ್ಲ. ಮೊನ್ನೆ ನಡೆದ ಸ್ವಾತಂತ್ರೊÈÃತ್ಸವದಲ್ಲೂ ಶಾಸಕರು ಭಾಗವಹಿಸಿರಲಿಲ್ಲ. ಇಂದಿನ ಪ್ರತಿಭಟನೆಗೂ ಬರಲಿಲ್ಲ.
ಸಿಎಂ ಪರ ಕುರುಬ ಮಠಾಧೀಶರು: ಯಾವುದೇ ತಪ್ಪು ಮಾಡದಿದ್ದರೂ ಮುಡಾ ಹಗರಣಕ್ಕೆ ಸಂಬAಧಿಸಿದAತೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಾಲುಮತ ಸಮಾಜದ ಜಗದ್ಗುರು ಶ್ರೀ ರೇವಣಸಿz್ದÉÃಶ್ವರ ಶಾಂತಮಯ ಮಹಾಸ್ವಾಮೀಜಿ ಖಂಡಿಸಿz್ದÁರೆ. ತನಿಖೆ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ. ನೇರ ನುಡಿಯ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ದ್ವೇಷ ರಾಜಕಾರಣ ಮಾಡುತ್ತಿವೆ. ರಾಜ್ಯದ ಕುರುಬರು ಹಾಗೂ ಸಮಾಜದ ಎಲ್ಲ ಮಠಾಧೀಶರು ಸಿಎಂ ಪರ ಬೆಂಬಲಕ್ಕೆ ನಿಲ್ಲುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ವಿರುದ್ಧ ಮೇಟಿ ಕಿಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಪ್ರಾಸಿಕ್ಯೂಷನ್‌ನೆ ಅನುಮತಿ ಕೊಡಿಸಿದ್ದನ್ನು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಖಂಡಿಸಿದ್ದಾರೆ. ಜನಪರ ಬಜೆಟ್ ಮಂಡಿಸಿರುವ ಸಿಎಂ ಬಡವರ ಉದ್ಧಾರಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ಸಹಿಸಲಾಗದು ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.