ಬಸವಕಲ್ಯಾಣ: ಬೀದಿ ಬದಿ ವ್ಯಾಪಾರಿಗಳು ಶ್ರಮ ಜೀವಿಗಳಾಗಿದ್ದು, ಬಿಸಿಲು ಮಳೆ ಲೆಕ್ಕಿಸದೇ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ ಅವರ ಸಮಸ್ಯೆಗಳಿಗೆ ಸ್ಪಂದಿಸುವದು ಅವಶ್ಯಕ ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಸಲಹೆ ನೀಡಿದರು.
ಗುರುವಾರ ತಮ್ಮ ನಿವಾಸದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ತಾಲೂಕಾ ಅಧ್ಯಕ್ಷರಾಗಿ ನೇಮಕವಾದ ಪಿಂಟು ಕಾಂಬಳೆ ಹಾಗೂ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಆಯ್ಕೆಯಾಗಿರುವ ಎಲ್ಲ ಪದಾಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ತರಹದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಅವರ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟವರ ಗಮನಕ್ಕೆ ತರುವ ಮೂಲಕ ತಾವು ಸಹ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳ ವಿಭಾಗದ ಬಸವಕಲ್ಯಾಣ ಗ್ರಾಮೀಣ ಘಟಕದ ಅಧ್ಯಕ್ಷ ಸಾಗರ ರಾಯಗೋಳ, ಹುಲಸೂರ ತಾಲೂಕು ಅಧ್ಯಕ್ಷ ದತ್ತಾ ಮೋರೆ, ಬಸವಕಲ್ಯಾಣ ನಗರ ಘಟಕದ ಅಧ್ಯಕ್ಷ ಅಲ್ತಾಫ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ರಾಜೇಶ್ವರಿ ಮೋರೆ, ಸೈಯದ್ ಖಾಜಾಸಾಬ್, ಶ್ರೀದೇವಿ ಕೋರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎಂ.ಡಿ. ಮೇಹತಾಬಸಾಬ್, ವಿಲಾಸ ಸೂರ್ಯವಂಶಿ, ನಾಗಮ್ಮ ಬ್ಯಾಡಗಿ, ಶಾಸಿನ್ ಸುಲ್ತಾನಾ ಬೇಗಂ ಹಾಗೂ ಕಾರ್ಯದರ್ಶಿಗಳಾದ ರಫೀಕ್ ಸಾಬ್ ನಿಟ್ಟೂರೆ, ಅರುಣಾ ಅರ್ಜುನ ಅವರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷ ರಾಜಕುಮಾರ ಮೋರೆ, ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಉಸ್ತುವಾರಿ ಮಸ್ತಾನ್ ಪಟೇಲ್, ದಿಲೀಪ್ ಶಿಂಧೆ, ಕವಿರಾಜ, ಮನೋಜ್ ಖೇಲೆ ಇತರರಿದ್ದರು.