ಜಿಲ್ಲೆ

ಬೀದಿ ನಾಟಕದ ಮೂಲಕ ಮತದಾನದ ಅರಿವು

ಬೇಲೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ತಾಲೂಕು ಸ್ವೀಪ್ ಸಮಿತಿಯಿಂದ ತಾಲೂಕಿನ ನಾರ್ವೆ ಗ್ರಾಮದಲ್ಲಿ ಮಂಗಳವಾರ ಬೀದಿ ನಾಟಕದ ಮೂಲಕ ಮತದಾನದ ಅರಿವು ಮೂಡಿಸಲಾಯಿತು.


ತಾಲೂಕು ಸ್ವೀಪ್ ಸಮಿತಿ ಸಂಯೋಜಕ ದಿನೇಶ್ ಮಾತನಾಡಿ, ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಬೇಕು. ಮತದಾರರು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ, ಸಂವಿಧಾನಾತ್ಮಕವಾಗಿ ಸಿಕ್ಕಿರುವ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದರು.


ಬೀದಿ ನಾಟಕವನ್ನು ನೀಲಮ್ಮ ಮತ್ತು ತಂಡದವರು ನಡೆಸಿಕೊಟ್ಟರು. ನಾರ್ವೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಾಮರಾಜ್, ಸಿಬ್ಬಂದಿ ಸುನೀತಾ, ರಾಜು ಹಾಗೂ ಗ್ರಾಮಸ್ಥರಿದ್ದರು.