ಜಿಲ್ಲೆ

ಬೀದರ್- ಬೆಂಗಳೂರು ರೈಲಿಗೆ ಚಾಲನೆ

ಕಲಬುರಗಿ: ಬೀದರ್-ಬೆಂಗಳೂರು ವಾಯಾ ಕಲಬುರಗಿ ರೈಲು ಸಂಚಾರಕ್ಕೆ ಭಾನುವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಸಂಸದ ಡಾ.ಉಮೇಶ ಜಾಧವ್ ಸ್ವಾಗತಿಸಿ, ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿ, ಕಲಬುರಗಿ ಮೂಲಕ ಬೆಂಗಳೂರಿಗೆ ಹೊಸ ರೈಲು ಆರಂಭವಾಗಿದ್ದು, ಈ ಭಾಗದ ಜನಸಾಮಾನ್ಯರಿಗೆ ಭಾರಿ ಅನುಕೂಲವಾಗಲಿದೆ. ಪ್ರಸ್ತುತ ಬರಗಾಲ ಆರಂಭವಾಗಿದ್ದು, ಕೆಲಸವನ್ನು ಅರಸಿ ಬೆಂಗಳೂರಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದ್ದು, ಅವರಿಗೆ ಈ ರೈಲು ಸಾಥ್ ನೀಡಲಿದೆ ಎಂದರು.

ಈ ರೈಲು ವಾರಕ್ಕೊಮೆ ಸಂಚರಿಸಲಿದೆ. ಶೀಘ್ರದಲ್ಲಿ ಈ ರೈಲು ನಿತ್ಯ ಸಂಚರಿಸುವAತೆ ಮಾಡಲಾಗುವುದು. ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲುಗಳನ್ನು ಆರಂಭಿಸುವಂತೆ ಮನವಿ ಮಾಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಇತರರಿದ್ದರು.